ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಸುಪಾರಿ ನೀಡಿದ 2ನೇ ಹೆಂಡತಿ ಬಂಧನ !

Prasthutha|

ಬೆಳಗಾವಿ: ಮಾರ್ಚ್ 15ರಂದು ಭವಾನಿ ನಗರದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಗೆ ಸಂಬಂಧಿಸಿದಂತೆ ಎರಡನೇ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.  

- Advertisement -

ಹತ್ಯೆಯಾಗಿದ್ದ ರಾಜು ಅವರ 2ನೇ  ಹೆಂಡತಿ ಕಿರಣ ದೊಡ್ಡಬೊಮ್ಮನವರ್. ಮತ್ತಿಬ್ಬರು ರಾಜು ಬ್ಯುಸಿನೆಸ್ ಪಾರ್ಟ್ನರ್ ಶಶಿಕಾಂತ್ ಶಂಕರಗೌಡ ಹಾಗೂ ಧರ್ಮೇಂದ್ರ ಘಂಟಿ ಎಂಬುವರನ್ನು ಬಂಧಿಸಲಾಗಿದೆ.

ಕೊಲೆಯಾದ ರಾಜು ಮೂರು ವಿವಾಹದ ಕಾರಣಕ್ಕೆ ಗಂಡ, ಹೆಂಡತಿ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಮತ್ತೊಂದೆಡೆ ಲಾಭದಲ್ಲಿ ಪಾಲುದಾರರಿಗೆ ರಾಜು ಹಣ ನೀಡಿರಲಿಲ್ಲ. ಇದೇ ಕಾರಣಕ್ಕೆ ರಾಜು ಹಾಗೂ ಪಾಲುದಾರರ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ  ಎರಡನೇ ಹೆಂಡತಿ ಹಾಗೂ ಬ್ಯುಸಿನೆಸ್ ಪಾರ್ಟ್ನರ್ ಗಳು ಸೇರಿ 10 ಲಕ್ಷಕ್ಕೆ ಸುಪಾರಿ ನೀಡಿ ರಾಜು ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp