ಬೆಳಗಾವಿ ತಾಯಿ, ಇಬ್ಬರು ಪುಟ್ಟ ಮಕ್ಕಳ ಕೊಲೆ ಪ್ರಕರಣ: ಆರೋಪಿ ನಿರ್ದೋಷಿ ಎಂದ ಹೈಕೋರ್ಟ್

Prasthutha|

ಬೆಳಗಾವಿ: ರಾಜ್ಯವಲ್ಲದೇ ದೇಶದಾದ್ಯಂತ ದೊಡ್ಡ ಸದ್ದು ಮಾಡಿದ್ದ ತಾಯಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಭಟ್ ಅವರನ್ನು ಧಾರವಾಡದ ಹೈಕೋರ್ಟ್ ಪೀಠ ನಿರ್ದೋಷಿ ಎಂದು ತೀರ್ಪು ನೀಡಿದೆ. ತ್ರಿವಳಿ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಹಾಗೂ ಎಂ.ಜಿ.ಎಸ್ ಕಮಲ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠವು ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ನೀಡಿ, ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದೆ.

- Advertisement -


ಕಳೆದ 2015ರ ಆಗಸ್ಟ್ 16ರಂದು ನಸುಕಿನ ಜಾವ ಇಲ್ಲಿನ ಕುವೆಂಪು ನಗರದ ಮನೆಯಲ್ಲಿ ತ್ರಿವಳಿ ಕೊಲೆ ನಡೆದಿತ್ತು.
ಗೃಹಿಣಿ ರೀನಾ ಮಾಲಗತ್ತಿ, ಅವರ ಮಕ್ಕಳಾದ ಆದಿತ್ಯ ಹಾಗೂ ಸಾಹಿತ್ಯ ಅವರನ್ನು ಬೆಡ್ ರೂಮಿನಲ್ಲೇ ಕೊಲೆ ಮಾಡಲಾಗಿತ್ತು. ರೀನಾ ಅವರೂಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರವೀಣ್ ಭಟ್ ಈ ಕೊಲೆ ಮಾಡಿದ್ದಾಗಿ, ರೀನಾ ಅವರ ಸಹೋದರ ದೂರು ದಾಖಲಿಸಿದ್ದರು.


ಪೊಲೀಸರು 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2018ರ ಏಪ್ರಿಲ್ 16ರಂದು ಪ್ರವೀಣ್ ಭಟ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಆದರೆ, ಈ ಆದೇಶವನ್ನು ತಡೆಹಿಡಿದ ಧಾರವಾಡ ಹೈಕೋರ್ಟ್ ಪೀಠ

Join Whatsapp