ದೀರ್ಘ ದಂಡ ನಮಸ್ಕಾರ ಮಾಡುವಾಗ ತಲೆ ಮೇಲೆ ಕಾರು ಹರಿದು ಯುವತಿ ಮೃತ್ಯು

Prasthutha|

ಬೆಳಗಾವಿ: ರಸ್ತೆ ಬದಿಯಲ್ಲಿ ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರೊಂದು ತಲೆಯ ಮೇಲೆ ಹರಿದು ಯುವತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

ಐಶ್ವರ್ಯಾ ನಾಯಕ್(22) ಮೃತ ಯುವತಿ.
ಐಶ್ವರ್ಯಾ ಅವರು ಕೃಷ್ಣಾ ನದಿಯಿಂದ ರಸ್ತೆ ಬದಿಯಲ್ಲಿ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹರಕೆ ತೀರಿಸುವಾಗ ಈ ಅನಾಹುತ ಸಂಭವಿಸಿದೆ.
ಸದ್ಯ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -