ಬೆಳಗಾವಿ: ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲ್ಪಟ್ಟ ಎಸ್ ಡಿಪಿಐ ಹಾಗೂ ಕೇಂದ್ರದಿಂದ ಇತ್ತೀಚೆಗೆ ನಿಷೇಧಕ್ಕೊಳಗಾದ ಪಿಎಫ್ ಐ ಸಂಘಟನೆಯ ಏಳು ಮುಖಂಡರಿಗೆ ಮಂಗಳವಾರ ಜಾಮೀನು ದೊರೆತಿದೆ.
ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾಡಿ ಅವರು ಆರೋಪಿಗಳಿಂದ 50 ಸಾವಿರದ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.
ಆಜಂ ನಗರ ನಿವಾಸಿಗಳಾದ ಪಿಎಫ್ ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಝಕೀವುಲ್ಲಾ ಫೈಜಿ, ಎಸ್ ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರದ ಪಿಎಫ್ ಐ ಕಾರ್ಯಕರ್ತರಾದ ಸಲಾವುದ್ದೀನ್ ಖಿಲ್ಲೇವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಝೀಝ್ ಇವರಿಗೆ ಜಾಮೀನು ನೀಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನು ಸೆ. 27ರಂದು ಬಂಧಿಸಲಾಗಿತ್ತು.