ದ.ಕ ಜಿಲ್ಲೆಯಲ್ಲಿ 6, 7 ನೇ ತರಗತಿ ಆರಂಭ

Prasthutha|

ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದಿನಿಂದ 6 ಹಾಗೂ 7 ನೇ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳು ನಗು ಮುಖದೊಂದಿಗೆ ಶಾಲೆಗೆ ಹೋಗುವ ದೃಶ್ಯ ಕಂಡು ಬಂತು. ಶಿಕ್ಷಕರು ವಿದ್ಯಾರ್ಥಿಗಳನ್ನು ಖುಷಿಯಿಂದ ಸ್ವಾಗತಿಸಿದರು.

ವಿಶೇಷವಾಗಿ ದ.ಕದಲ್ಲಿ 6,7 ತರಗತಿಗಳು ಬೆಳಿಗ್ಗೆ ನಡೆದರೆ, 8 ನೇ ತರಗತಿ ಮಧ್ಯಾಹ್ನದ ಬಳಿಕ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಅಲ್ಲದೆ ವಿದ್ಯಾರ್ಥಿಗಳ ಹಾಜರಾತಿ ಕೂಡ ಈ ವಾರದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

- Advertisement -