ಜನಸ್ಪಂದನ ಕಾರ್ಯಕ್ರಮವನ್ನು ಟೀಕಿಸುವ ಮೊದಲು ಸಿದ್ದರಾಮೋತ್ಸವದ ಲೆಕ್ಕ ನೀಡಲಿ: ಕೆ.ಎಸ್. ಈಶ್ವರಪ್ಪ

Prasthutha|

ಶಿವಮೊಗ್ಗ: ಜನಸ್ಪಂದನ ಕಾರ್ಯಕ್ರಮವನ್ನು ಟೀಕಿಸುವ ಮೊದಲು ಸಿದ್ದರಾಮೋತ್ಸವ ಕಾರ್ಯಕ್ರಮದ ಲೆಕ್ಕ ನೀಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ಜನಸಾಗರವೇ ಸೇರಿತ್ತು. ಇಂದು ಜನಸ್ಪಂದನವು ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ನೋಡಿ ಸಹಿಸಲಾಗದೇ ಸಿದ್ದರಾಮಯ್ಯ ಮಾತಾಡುತ್ತಿದ್ದಾರೆ ಎಂದು ಹೇಳಿದರು.

Join Whatsapp