ಬಿಸಿ ರೋಡ್: ನಾಳೆ SDPI 16ನೇ ಸಂಸ್ಥಾಪನಾ ದಿನಾಚರಣೆ

Prasthutha|

ಬಿಸಿ ರೋಡ್: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಆರಂಭವಾಗಿ 15 ವರ್ಷ ದಾಟಿದ ಹಿನ್ನೆಲೆಯಲ್ಲಿ ನಾಳೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸಮಯ ಬೆಳಿಗ್ಗೆ 9:00 ಗಂಟೆಗೆ ಬಿಸಿ ರೋಡ್ ಕೈಕಂಬ ಕಛೇರಿಯಲ್ಲಿ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.

- Advertisement -

SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ದ್ವಜಾರೋಹಣ ಮತ್ತು ಸಂದೇಶ ನೀಡಲಿದ್ದಾರೆ.

ಸಭಾಧ್ಯಕ್ಷತೆಯ‌ನ್ನು SDPI ದ‌.ಕ. ಜಿಲ್ಲಾದ್ಯಕ್ಷ ಅನ್ವರ್ ಸಾದತ್ ಬಜತ್ತೂರು ವಹಿಸಲಿದ್ದಾರೆ. ಅತಿಥಿಗಳಾಗಿ ನಸ್ರಿಯಾ ಬೆಳ್ಳಾರೆ(ರಾಜ್ಯ ಪ್ರಧಾನ ಕಾರ್ಯದರ್ಶಿ ವಿಮೆನ್ ಇಂಡಿಯಾ ಮೂವ್ಮೆಂಟ್), ಅಕ್ಬರ್ ಅಲಿ ಪೊನ್ನೋಡಿ(ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರು), ಮಿಸ್ರಿಯಾ ಕಣ್ಣೂರು
(ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷರು), ಅಶ್ರಫ್ ಅಡ್ಡೂರು (ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಜಮಾಲ್ ಜೋಕಟ್ಟೆ
(ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ), ನೌರೀನ್ ಆಲಂಪಾಡಿ (ಜಿಲ್ಲಾಧ್ಯಕ್ಷೆ ವಿಮನ್ ಇಂಡಿಯಾ ಮೂವ್ಮೆಂಟ್ ), ಮೂನಿಶ್ ಅಲಿ
(ಅಧ್ಯಕ್ಷರು ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ) ಭಾಗವಹಿಸಲಿದ್ದಾರೆ ಎಂದು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ.

Join Whatsapp