ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಯಾವೆಲ್ಲ ವಾರ್ಡ್​ಗಳ ಹೆಸರು ಬದಲಾವಣೆ? ಇಲ್ಲಿದೆ ವಿವರ

Prasthutha|

ಬೆಂಗಳೂರು: ಈ ಹಿಂದೆ ಬಿಜೆಪಿ ಸರ್ಕಾರ 198 ವಾರ್ಡ್​ಗಳನ್ನು 243 ವಾರ್ಡ್​ಗಳನ್ನಾಗಿ ವಿಂಗಡಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 243 ವಾರ್ಡ್‌ ಗಳನ್ನು 225 ವಾರ್ಡ್‌ಗಳಿಗೆ ಇಳಿಸಿದೆ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್​ಗಳನ್ನ ಪುನರ್ ವಿಂಗಡಣೆ ಮಾಡಿ ಅಂತಿಮಗೊಳಿಸಿದೆ.

- Advertisement -

ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. 15 ದಿನಗಳ ಒಳಗಾಗಿ ಆಕ್ಷೇಪಣೆ, ಸಲಹೆ ನೀಡುವಂತೆ ಸಾರ್ವಜನಿಕರನ್ನು ಕೋರಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಕೆಲ ವಾರ್ಡ್ ಹೆಸರುಗಳನ್ನು ಬದಲಾಯಿಸಲಾಗಿದೆ.

ಬದಲಾದ ವಾರ್ಡ್​ಗಳು ಹೀಗಿವೆ

- Advertisement -

ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬ್ಯಾಡರಹಳ್ಳಿ ವಾರ್ಡ್​ನ್ನು ಲಿಂಗಧೀರನಹಳ್ಳಿ.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್​ ಅನ್ನು ರಾಜೀವ್​ ನಗರ.

ನಂದಿನಿ ಲೇಔಟ್ ವಾರ್ಡ್​ ಅನ್ನು ಡಾ. ಪುನೀತ್ ರಾಜ್​ಕುಮಾರ್​ ವಾರ್ಡ್​.

ಡಾ. ಪುನೀತ್ ರಾಜ್​ಕುಮಾರ್ ವಾರ್ಡ್​ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರ್.

ಸರ್ವಜ್ಞನಗರ ಕ್ಷೇತ್ರದ ಕೆಎಸ್ಎಲ್​ ಲೇಔಟ್ ವಾರ್ಡ್​ ಅನ್ನು ಸುಬ್ಬಯ್ಯನಪಾಳ್ಯ.

ಶಿವಾಜಿನಗರ ಕ್ಷೇತ್ರದ ಎಸ್.ಆರ್.ನಗರ ವಾರ್ಡ್​ ಅನ್ನು ಸಂಪಂಗಿರಾಮನಗರ.

ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್​ ಅನ್ನು ಅಶೋಕನಗರ.

ರಾಜಾಜಿನಗರ ಕ್ಷೇತ್ರ ಹಾಗೂ ಬಸವನಗುಡಿ ಕ್ಷೇತ್ರಗಳಲ್ಲಿ ತಲಾ ಮೂರು ವಾರ್ಡ್​ಗಳ ಹೆಸರನ್ನು ಬದಲಿಸಲಾಗಿದೆ.

ರಾಜಾಜಿನಗರ ಕ್ಷೇತ್ರದ ಪ್ರಕಾಶನಗರ ವಾರ್ಡ್​ ಅನ್ನು ಶ್ರೀರಾಮಮಂದಿರ.

ಶ್ರೀರಾಮಮಂದಿರ ವಾರ್ಡ್​ ಅನ್ನು ಶಿವನಗರ ಹಾಗೂ ಶಿವನಗರ ವಾರ್ಡ್​ ಅನ್ನು ರಾಜಾಜಿನಗರ.

ಬಸವನಗುಡಿ ಕ್ಷೇತ್ರದಲ್ಲಿ ಹನುಮಂತನಗರ ವಾರ್ಡ್​ ಅನ್ನು ಗವಿಗಂಗಾಧರೇಶ್ವರ

ಬಸವನಗುಡಿ ವಾರ್ಡ್​ ಅನ್ನು ದೊಡ್ಡ ಗಣಪತಿ ಹಾಗೂ ಗಿರಿನಗರ ವಾರ್ಡ್ ಸ್ವಾಮಿ ವಿವೇಕಾನಂದ ವಾರ್ಡ್

ಚಿಕ್ಕಪೇಟೆ ಕ್ಷೇತ್ರದ ಸೋಮೇಶ್ವರನಗರ ವಾರ್ಡ್ ಅನ್ನು ಬಿ.ವೆಂಕಟರೆಡ್ಡಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ.

ಬಿಬಿಎಂಪಿ ಚುನಾವಣೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಡಿಸೆಂಬರ್​ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

Join Whatsapp