ಬೆಂಗಳೂರು: ಈ ಹಿಂದೆ ಬಿಜೆಪಿ ಸರ್ಕಾರ 198 ವಾರ್ಡ್ಗಳನ್ನು 243 ವಾರ್ಡ್ಗಳನ್ನಾಗಿ ವಿಂಗಡಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 243 ವಾರ್ಡ್ ಗಳನ್ನು 225 ವಾರ್ಡ್‌ಗಳಿಗೆ ಇಳಿಸಿದೆ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್ಗಳನ್ನ ಪುನರ್ ವಿಂಗಡಣೆ ಮಾಡಿ ಅಂತಿಮಗೊಳಿಸಿದೆ.
ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. 15 ದಿನಗಳ ಒಳಗಾಗಿ ಆಕ್ಷೇಪಣೆ, ಸಲಹೆ ನೀಡುವಂತೆ ಸಾರ್ವಜನಿಕರನ್ನು ಕೋರಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಕೆಲ ವಾರ್ಡ್ ಹೆಸರುಗಳನ್ನು ಬದಲಾಯಿಸಲಾಗಿದೆ.
ಬದಲಾದ ವಾರ್ಡ್ಗಳು ಹೀಗಿವೆ
ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬ್ಯಾಡರಹಳ್ಳಿ ವಾರ್ಡ್ನ್ನು ಲಿಂಗಧೀರನಹಳ್ಳಿ.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್ ಅನ್ನು ರಾಜೀವ್ ನಗರ.
ನಂದಿನಿ ಲೇಔಟ್ ವಾರ್ಡ್ ಅನ್ನು ಡಾ. ಪುನೀತ್ ರಾಜ್ಕುಮಾರ್ ವಾರ್ಡ್.
ಡಾ. ಪುನೀತ್ ರಾಜ್ಕುಮಾರ್ ವಾರ್ಡ್ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರ್.
ಸರ್ವಜ್ಞನಗರ ಕ್ಷೇತ್ರದ ಕೆಎಸ್ಎಲ್ ಲೇಔಟ್ ವಾರ್ಡ್ ಅನ್ನು ಸುಬ್ಬಯ್ಯನಪಾಳ್ಯ.
ಶಿವಾಜಿನಗರ ಕ್ಷೇತ್ರದ ಎಸ್.ಆರ್.ನಗರ ವಾರ್ಡ್ ಅನ್ನು ಸಂಪಂಗಿರಾಮನಗರ.
ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ ಅನ್ನು ಅಶೋಕನಗರ.
ರಾಜಾಜಿನಗರ ಕ್ಷೇತ್ರ ಹಾಗೂ ಬಸವನಗುಡಿ ಕ್ಷೇತ್ರಗಳಲ್ಲಿ ತಲಾ ಮೂರು ವಾರ್ಡ್‌ಗಳ ಹೆಸರನ್ನು ಬದಲಿಸಲಾಗಿದೆ.
ರಾಜಾಜಿನಗರ ಕ್ಷೇತ್ರದ ಪ್ರಕಾಶನಗರ ವಾರ್ಡ್ ಅನ್ನು ಶ್ರೀರಾಮಮಂದಿರ.
ಶ್ರೀರಾಮಮಂದಿರ ವಾರ್ಡ್ ಅನ್ನು ಶಿವನಗರ ಹಾಗೂ ಶಿವನಗರ ವಾರ್ಡ್ ಅನ್ನು ರಾಜಾಜಿನಗರ.
ಬಸವನಗುಡಿ ಕ್ಷೇತ್ರದಲ್ಲಿ ಹನುಮಂತನಗರ ವಾರ್ಡ್ ಅನ್ನು ಗವಿಗಂಗಾಧರೇಶ್ವರ
ಬಸವನಗುಡಿ ವಾರ್ಡ್ ಅನ್ನು ದೊಡ್ಡ ಗಣಪತಿ ಹಾಗೂ ಗಿರಿನಗರ ವಾರ್ಡ್ ಸ್ವಾಮಿ ವಿವೇಕಾನಂದ ವಾರ್ಡ್
ಚಿಕ್ಕಪೇಟೆ ಕ್ಷೇತ್ರದ ಸೋಮೇಶ್ವರನಗರ ವಾರ್ಡ್ ಅನ್ನು ಬಿ.ವೆಂಕಟರೆಡ್ಡಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ.
ಬಿಬಿಎಂಪಿ ಚುನಾವಣೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಡಿಸೆಂಬರ್ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.