ಡ್ರೋನ್ ಬಳಸಿ ಬೀದಿ ನಾಯಿಗಳ ಗಣತಿಗೆ ಮುಂದಾದ ಬಿಬಿಎಂಪಿ

Prasthutha|

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇತ್ತೀಚೆಗಷ್ಟೇ ಬಿಬಿಎಂಪಿ ಕೆಲ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬೀದಿ ನಾಯಿಗಳ ದಾಳಿಯಿಂದ ಸೇಫ್ ಆಗಲು ಏನೆಲ್ಲ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿತ್ತು. ಸದ್ಯ ಈಗ ಬರೋಬ್ಬರಿ ನಾಲ್ಕು ವರ್ಷದ ಬಳಿಕ ಸಿಲಿಕಾನ್ ಸಿಟಿಯಲ್ಲಿ ಶ್ವಾನ ಗಣತಿಗೆ ಬಿಬಿಎಂಪಿ ಮುಂದಾಗಿದೆ. ಇದ್ಕಕಾಗಿ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದು ಡ್ರೋನ್ ಬಳಸಿ ನಾಯಿಗಳ ಗಣತಿ ಮಾಡಲಿದೆ.

- Advertisement -

ಜುಲೈ ಒಂದರಿಂದ ತಂತ್ರಜ್ಞಾನದ ಮೂಲಕ ಬೆಂಗಳೂರಿನ ಬೀದಿ ನಾಯಿಗಳ ಗಣತಿಗೆ ಬಿಬಿಎಂಪಿ ತಯಾರಿ ನಡೆಸುತ್ತಿದೆ. ಇದೇ ಮೊದಲ ಬಾರಿಗೆ ನಾಯಿಗಳ ಗಣತಿಗೆ ಡ್ರೋನ್ ಬಳಕೆ ಮಾಡಲಾಗುತ್ತಿದೆ. 2019ರ ಸಮೀಕ್ಷೆಯಲ್ಲಿ ಸುಮಾರು ಮೂರು ಲಕ್ಷ ನಾಯಿಗಳನ್ನ ಗುರುತಿಸಲಾಗಿತ್ತು. ಇದಾದ ನಂತರ ಬಿಬಿಎಂಪಿ ಸಂತಾನ ಹರಣ ಲಸಿಕೆ ಹಾಕಿದ ಬಳಿಕ ನಗರದಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಬಗ್ಗೆ ಸರ್ವೆ ಮಾಡಿಸಿರಲಿಲ್ಲ. ಸಂತಾನ ಶಕ್ತಿ ಕಾರ್ಯಕ್ರಮಗಳು ಸಕ್ಸಸ್ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈಗ ಸಿಟಿಯಲ್ಲಿ ಎಷ್ಟು ನಾಯಿಗಳಿವೆ ಎಂಬ ಬಗ್ಗೆ ತಿಳಿದುಕೊಳ್ಳಲು ಹಾಗೂ ನಾಯಿಗಳ ನಿಯಂತ್ರಣ ಹೇಗೆ ಮಾಡಬೇಕು ಅಂತಾ ಪ್ಲಾನ್ ರೂಪಿಸಲು ಸರ್ವೆ ಮಾಡಲು ಮುಂದಾಗಿದೆ.

ಬೈಕ್​ ಮೂಲಕ ಸುತ್ತಾಡಿ ಸರ್ವೆ

- Advertisement -

ನಗರದಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಸರಿಯಾದ ಮಾಹಿತಿ ಪಾಲಿಕೆ ಬಳಿ ಇಲ್ಲ. ಹೀಗಾಗಿ ಬೀದಿ ನಾಯಿಗಳ ಗಣತಿಗೆ ಪಾಲಿಕೆ ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಮತ್ತು ರಾಜ್ಯ ಪಶುಸಂಗೋಪನ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಿದ್ದು ಡ್ರೋನ್ ತಂತ್ರಜ್ಞಾನದ ಮೂಲಕ ನಾಯಿಗಳ ಗಣತಿ ಮಾಡಲು ಮುಂದಾಗಿದೆ. 50 ತಂಡಗಳನ್ನು ಸಿದ್ದಪಡಿಸಿರುವ ಇಲಾಖೆ ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇರಲಿದ್ದಾರೆ. ಒಬ್ಬರು ವಾಹನ ಚಲಾಯಿಸಿದ್ರೆ ಮತ್ತೊಬ್ಬರು ನಾಯಿಯ ಚಿತ್ರ ತೆಗೆದು ಡೇಟಾ ಅಪ್ಲೋಡ್ ಮಾಡ್ತಾರೆ. ಜಿಯೋಟ್ಯಾಗ್ ಚಿತ್ರಣವನ್ನ ಅಪ್ಲಿಕೇಶನ್ ಅಲ್ಲಿ ಅಪ್ಲೋಡ್ ಮಾಡಲಾಗುತ್ತೆ. ಪ್ರತಿ ತಂಡವು ದಿನಕ್ಕೆ 5 ಕಿ ಮೀ ರಸ್ತೆ ಕ್ರಮಿಸುತ್ತೆ. ಬೆಳಿಗ್ಗೆ ಆರರಿಂದ 10 ರ ವರೆಗೆ ಗಣತಿ ನಡೆಯಲ್ಲಿದ್ದು ಯಾವ ತಂಡ ಎಲ್ಲಿ ಹೋಗಬೇಕೆಂದು ಈಗಾಗಲೇ ಮ್ಯಾಪ್ ರೆಡಿ ಕೂಡಾ ಮಾಡಲಾಗಿದೆ. ಡೇಟಾ ಆಧಾರದ ಮೇಲೆ ಪಶುಸಂಗೋಪನ ಇಲಾಖೆ 100 ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಿದೆ. ಜುಲೈ 1ರಿಂದ ಬೀದಿ ನಾಯಿ ಗಣತಿ ನಡೆಸಲು ಬಿಬಿಎಂಪಿ ಸಜ್ಜಾಗಿದೆ. 15 ದಿನಗಳಲ್ಲಿ ಸಂಪೂರ್ಣ ಸರ್ವೆ ಮುಗಿಯುವ ಸಾಧ್ಯತೆ ಎನ್ನಲಾಗಿದೆ.

Join Whatsapp