75 ಉಪ ವಿಭಾಗಗಳಾಗಿ ವಿಂಗಡಣೆಯಾದ ಬಿಬಿಎಂಪಿ

Prasthutha|

ಬೆಂಗಳೂರು: ಬಿಬಿಎಂಪಿಯ 30 ಉಪವಿಭಾಗಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ 75 ಉಪ ವಿಭಾಗಗಳನ್ನಾಗಿ ವಿಂಗಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಸರ್ಕಾರ 198 ವಾರ್ಡ್ ಗಳಿದ್ದ ಬಿಬಿಎಂಪಿಯನ್ನು 225 ವಾರ್ಡ್ ಗಳನ್ನಾಗಿ ಪುನರ್ ರಚಿಸಿ ಆದೇಶಿಸಿತ್ತು ಇದೀಗ 75 ಉಪ ವಿಭಾಗಗಳಾಗಿ ವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ.

- Advertisement -

225 ವಾರ್ಡ್‍ಗಳನ್ನು 75 ಕಂದಾಯ, ಆರೋಗ್ಯ, ಕಾಮಗಾರಿ ಉಪ ವಿಭಾಗಗಳಾಗಿ ವಿಂಗಡಣೆ ಮಾಡಿ ಪ್ರತಿ ಉಪ ವಿಭಾಗದಲ್ಲಿ ಎರಡರಿಂದ ನಾಲ್ಕು ವಾರ್ಡ್‍ಗಳಿರುವಂತೆ ವಿಂಗಡಣೆ ಮಾಡಲಾಗಿದೆ.8 ವಲಯಗಳಲ್ಲಿ 30 ವಿಭಾಗಗಳ ರಚನೆ, 30 ವಿಭಾಗಗಳಡಿ 75 ಉಪ ವಿಭಾಗಗಳಾಗಿ ವಿಂಗಡನೆ ಮಾಡಿ ಈ 75 ವಿಭಾಗಗಳಡಿ ಕೆಲಸ ನಿರ್ವಹಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ವಲಯ ವಿಭಾಗ ಉಪ ವಿಭಾಗ
ಬೊಮ್ಮನಹಳ್ಳಿ 3 9
ದಾಸರಹಳ್ಳಿ 2 4
ಪೂರ್ವವಲಯ 6 13
ಮಹದೇವಪುರ 2 9
ಆರ್.ಆರ್‍ನಗರ 3 7
ದಕ್ಷಿಣ 6 14
ಯಲಹಂಕ 2 6
ಪಶ್ಚಿಮ 6 13

Join Whatsapp