ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಬಿಎಂಪಿ ಸೂಪರಿಟೆಂಡೆಂಟ್ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದಿದೆ.
ರಂಗರಾಜು ಎಸ್ ಎ (59) ಸಾವನ್ನಪ್ಪಿದ ಸೂಪರಿಂಟೆಂಡೆಂಟ್ ಇಂಜಿನಿಯರ್. ಭಾನುವಾರ ರಾತ್ರಿ 11:30 ರ ಸುಮಾರಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಅವರು ಹುಬ್ಬಳ್ಳಿ – ಬೆಂಗಳೂರು ರೈಲಿಗೆ ಹತ್ತಬೇಕಿತ್ತು, ಆದರೆ ಬೆಳಗಾವಿ ಬೆಂಗಳೂರು ರೈಲಿಗೆ ಹತ್ತಿರುವುದು ಗೊತ್ತಾಗಿದೆ.
ರೈಲು ಚಲಿಸುತ್ತಿರುವಾಗ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಪ್ಲಾಟ್ ಫಾರ್ಂ ನಲ್ಲಿ ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಅವರು ಬಿಬಿಎಂಪಿಯ ಕೆ ಆರ್ ಐ ಡಿ ಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ರಂಗರಾಜು ಅವರು ಪತ್ನಿ, ಓರ್ವ ಪುತ್ರ,ಓರ್ವ ಪುತ್ರಿಯನ್ನು ಅಗಲಿದ್ದಾರೆ.