ಮಾರ್ಷಲ್‌​ಗಳನ್ನು ರದ್ದು ಮಾಡುವಂತೆ ಬಿಬಿಎಂಪಿ ನೌಕರರ ಸಂಘ ಪತ್ರ

Prasthutha|

ಬೆಂಗಳೂರು: ಕೋವಿಡ್ ಸಮಯದಲ್ಲಿ ಬಿಬಿಎಂಪಿ ನೇಮಿಸಿದ ಮಾರ್ಷಲ್​ಗಳನ್ನು ರದ್ದು ಮಾಡುವಂತೆ ಒತ್ತಡ ಹೆಚ್ಚುತ್ತಿದೆ. ಇತ್ತೀಚೆಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಮಾರ್ಷಲ್ ಗಳು ವೃದ್ಧ ವ್ಯಾಪಾರಿಗೆ ಥಳಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಬಿಎಂಪಿ ನೌಕರರ ಸಂಘ ಮಾರ್ಷಲ್​ ಗಳನ್ನು ರದ್ದು ಮಾಡುವಂತೆ ಪಾಲಿಕೆಗೆ ಪತ್ರ ಬರೆದಿದೆ.

- Advertisement -

ಮಾರ್ಷಲ್​ ಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ, ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಆಗ್ಗಾಗ್ಗೆ ಒಂದಿಲ್ಲೊಂದು ಯಡವಟ್ಟು ಮಾಡಿಕೊಂಡು ಬಿಬಿಎಂಪಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇವರ ವರ್ತನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಿಂದ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಅಲ್ಲದೆ ಸುಖಾಸುಮ್ಮನೆ ಇವರ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಪಾಲಿಕೆ ವ್ಯಯಿಸುತ್ತಿದೆ. ಹೀಗಾಗಿ ಮಾರ್ಷಲ್ಸ್ ಅನ್ನು ಸೇವೆಯಿಂದ ರದ್ದು ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಜಯನಗರದಲ್ಲಿ ವೃದ್ಧ ವ್ಯಾಪಾರಿ ಥಳಿತದ ಘಟನೆಗೂ ಮುನ್ನ ಯಲಹಂಕ ವಲಯದಲ್ಲಿ ಮಾರ್ಷಲ್ ಗಳ ಓಡಾಟಕ್ಕೆ ನೀಡಲಾಗಿದ್ದ ಗಸ್ತು ವಾಹನದಲ್ಲಿ ಮದ್ಯ ಸಾಗಾಟ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು.

- Advertisement -




Join Whatsapp