BBLಗೆ ಉನ್ಮುಕ್ತ್ ಚಾಂದ್: ಬಿಗ್ ಬ್ಯಾಷ್ ಲೀಗ್’ ನಲ್ಲಿ ಆಡಲಿರುವ ಮೊತ್ತ ಮೊದಲ ಭಾರತೀಯ

Prasthutha|

ಮೆಲ್ಬೋರ್ನ್ : ಆಸ್ಟ್ರೇಲಿಯಾದ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಬಿಗ್ ಬ್ಯಾಷ್ ಲೀಗ್’ ನಲ್ಲಿ ಆಡಲು ಭಾರತದ ಉನ್ಮುಕ್ತ್ ಚಾಂದ್ ಸಹಿ ಮಾಡಿದ್ದಾರೆ. ಆ ಮೂಲಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಪುರುಷ ಆಟಗಾರನೊಬ್ಬ ಬಿಗ್ ಬ್ಯಾಷ್ ಲೀಗ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರೋನ್ ಫಿಂಚ್ ನೇತೃತ್ವದ ಮೆಲ್ಬೋರ್ನ್ ರೆನಿಗೇಡ್ಸ್ ತಂಡದಲ್ಲಿ 28 ವರ್ಷದ ಉನ್ಮುಕ್ತ್ ಚಂದ್ ಸ್ಥಾನ ಪಡೆದಿದ್ದಾರೆ. ವುಮೆನ್ ಬಿಗ್ ಬ್ಯಾಷ್ ಲೀಗ್ನಲ್ಲಿ ಭಾರತದ 8 ಆಟಗಾರ್ತಿಯರು ಪಾಲ್ಗೊಳ್ಳುತ್ತಿದ್ದಾರೆ.

- Advertisement -


ಭಾರತ A ತಂಡ, ರಣಜಿ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಆಡಿರುವ ಉನ್ಮುಕ್ತ್ ಚಾಂದ್, ಐಪಿಎಲ್ ನಲ್ಲಿ ಡೆಲ್ಲಿ, ಮುಂಬೈ ಮತ್ತು ರಾಜಸ್ಥಾನ್ ತಂಡಗಳಲ್ಲೂ ಮಿಂಚಿದ್ದರು. ಆದರೆ ಟೀಮ್ ಇಂಡಿಯಾಗೆ ಆಯ್ಕೆಯಾಗಲು ವಿಫಲರಾಗಿದ್ದ ಚಾಂದ್ ತಾನು ಭಾರತದಲ್ಲಿ ಕ್ರಿಕೆಟ್ ವೃತ್ತಿ ಜೀವನ ಅಂತ್ಯಗೊಳಿಸಿ ವಿದೇಶಗಳಲ್ಲಿ ಕ್ರಿಕೆಟ್ ಆಡಲು ಬಯಸುವುದಾಗಿ ಕಳೆದ ಆಗಸ್ಟ್’ ನಲ್ಲಿ ಬಿಸಿಸಿಐಗೆ ಪತ್ರ ಬರೆದಿದ್ದರು. ಬಳಿಕ ಬಳಿಕ ಅಮೆರಿಕದ ಮೈನರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರ ಚಾಂದ್ ಆಡಿದ್ದರು. ಅಲ್ಲದೆ ಟೂರ್ನಿಯಲ್ಲಿ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.


2012ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಉನ್ಮುಕ್ತ್ ಚಾಂದ್ ಮಹತ್ವದ ಪಾತ್ರ ವಹಿಸಿದ್ದರು. ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಚಾಂದ್ ಸೆಂಚುರಿ ಭಾರಿಸಿ ಮಿಂಚಿದ್ದರು. ಭಾರತದ ಪುರುಷ ಆಟಗಾರರಿಗೆ ವಿದೇಶಿ ಟೂರ್ನಿಗಳಲ್ಲಿ ಆಡಲು ಬಿಸಿಸಿಐ ಇದುವರೆಗೂ ಅನುಮತಿ ನೀಡಿಲ್ಲ.

Join Whatsapp