ಮಾರುವೇಷದಲ್ಲಿ ಶ್ರೀಲಂಕಾ ತೊರೆದು ದುಬೈಗೆ ಪರಾರಿ ಯತ್ನ: ಏರ್ ಪೋರ್ಟ್ ನಲ್ಲಿ ಬಾಸಿಲ್ ರಾಜಪಕ್ಸೆ ಪತ್ತೆ

Prasthutha|

►ದೇಶ ತೊರೆಯದಂತೆ ಮಾಜಿ ಹಣಕಾಸು ಸಚಿವರನ್ನು ತಡೆದ ಜನತೆ

- Advertisement -

ಕೊಲಂಬೊ: ಶ್ರೀಲಂಕಾದಲ್ಲಿ ಸರಕಾರಿ ವಿರೋಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಅಧ್ಯಕ್ಷರ ಮನೆಗೆ ಪ್ರತಿಭಟನಕಾರರು ಲಗ್ಗೆಯಿಟ್ಟಿದ್ದಾರೆ ಮತ್ತು ಪ್ರಧಾನಿಯ ಮನೆಯನ್ನೇ ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಹಣಕಾಸು ಸಚಿವ ಮತ್ತು ಗೋಟಬಯ ರಾಜಪಕ್ಸೆ ಅವರ ಸಹೋದರ ಬಾಸಿಲ್ ರಾಜಪಕ್ಸೆ ಅವರು ಮಾರುವೇಷ ಹಾಕಿಕೊಂಡು ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದ್ದು, ಆದರೆ ವಿಮಾನ ನಿಲ್ದಾಣದಲ್ಲಿ ಜನರು ಅವರನ್ನು ಪತ್ತೆ ಹಚ್ಚಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಅವರ ಸಹೋದರ ಬಾಸಿಲ್ ರಾಜಪಕ್ಸೆ ಅವರು ಮುಂಜಾನೆ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಟರ್ಮಿನಲ್ ಮೂಲಕ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾಗ ಜನರು ಅವರನ್ನು ಗುರುತಿಸಿ ಅವರು ದೇಶವನ್ನು ತೊರೆಯುವುದನ್ನು ತಡೆದಿದ್ದಾರೆ.

- Advertisement -

ಇವರು ಮಧ್ಯರಾತ್ರಿ 12.15 ಕ್ಕೆ ಚೆಕ್-ಇನ್ ಕೌಂಟರ್ ತಲುಪಿದರು ಮತ್ತು 3.15 ರವರೆಗೆ ಅವರು ಅಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಅವರ ಪ್ರಯಾಣಕ್ಕೆ ತಡೆದ ಕಾರಣ ಅವರು ಅಂತಿಮವಾಗಿ ವಿಮಾನ ನಿಲ್ದಾಣವನ್ನು ಬಿಟ್ಟು ಓಡಿದ್ದಾರೆ.

ಸದ್ಯ ರಾಜಪಕ್ಸೆ ಅವರು ಈಗ ಎಲ್ಲಿ ಅಡಗಿ ಕೂತಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿಲ್ಲ ಎಂದು ತಿಳಿದು ಬಂದಿದೆ.

Join Whatsapp