ಬಶೀರ್ ಚೊಕ್ಕಬೆಟ್ಟು ಅವರಿಗೆ ಪೊಲೀಸ್ ಪದಕ ಪ್ರದಾನ

Prasthutha|

ಮಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬಶೀರ್ ಚೊಕ್ಕಬೆಟ್ಟು ಅವರಿಗೆ ಪೊಲೀಸ್ ಪದಕ ಪ್ರದಾನ ಮಾಡಿ ಗೌರವಿಸಲಾಯಿತು.

- Advertisement -


ಸುರತ್ಕಲ್ ನ ಚೊಕ್ಕಬೆಟ್ಟು ನಿವಾಸಿಯಾದ ಬಶೀರ್ ಕಳೆದ 21 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಸಮಾಜ ಪರ ಚಿಂತನೆಯನ್ನು ಮೈಗೂಡಿಸಿ ಕೊಂಡಿರುವ ಬಶೀರ್ ಚೊಕ್ಕಬೆಟ್ಟು, ಸ್ಥಳೀಯ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಪಟ್ಟಿದ್ದಾರೆ.
ಬಾಲ್ಯದಲ್ಲಿಯೇ ಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವನೆಯನ್ನು ಬೆಳೆಸಿಕೊಂಡಿದ್ದ ಅವರು ಕೆಎಸ್ಆರ್ಪಿ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬಿಡುವಿನ ಸಮಯವನ್ನು ಅಂಗವಿಕಲರ ಸೇವೆಗಾಗಿ ಮೀಸಲಿಟ್ಟಿದ್ದಾರೆ.

- Advertisement -


ಈಗಾಗಲೇ ಬಶೀರ್ ಅವರು ಬಹಳಷ್ಡು ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗವಿಕಲರ ಸೌಲಭ್ಯದ ಜೊತೆಗೆ ಇತರರಿಗೂ ವಿಧವಾ ವೇತನ, ವೃದ್ಯಾಪ್ಯ ವೇತನ ಸೇರಿದಂತೆ ಹಲವಾರು ಸೌಲಭ್ಯ ಒದಗಿಸಿಕೊಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ರಜಾ ದಿನ ಹಾಗೂ ಬಿಡುವಿನ ವೇಳೆಗಳಲ್ಲಿ ಆಶ್ರಮಗಳಿಗೂ ತೆರಳಿ ಹಿರಿಯರ ಸೇವೆ ಮಾಡುತ್ತಿದ್ದಾರೆ.


ಇವರಿಗೆ ಬೆಂಗಳೂರಿನ ಕನ್ನಡ ಅಭಿವೃದ್ಧಿ ಸಮಿತಿಯ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಜೂನಿಯರ್ ಚೇಂಬರ್ ವತಿಯಿಂದ ಉತ್ತಮ ಸಾಧಕ ಪ್ರಶಸ್ತಿ, ಜೆಸಿಐ ಯುವ ಸಾಧಕ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಸೇವಾ ರತ್ನ ಪ್ರಶಸ್ತಿ, ಗಡಿನಾಡ ದೋಣಿ ಪ್ರಶಸ್ತಿ, 2020 ರಲ್ಲಿ ಹೊರದೇಶದಲ್ಲಿ ನೆಲೆಸಿರುವ ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫಾರಂ ವತಿಯಿಂದ ಹುಟ್ಟೂರ ಸನ್ಮಾನ ಮೊದಲಾದ ಪ್ರಶಸ್ತಿಗಳು ಸಂದಿವೆ.



Join Whatsapp