ಮೊದಲು ನೀರು ನಿಲ್ಲಿಸಿ ಆಮೇಲೆ ಕೋರ್ಟ್​ನಲ್ಲಿ ವಾದ ಮಾಡಿ: ರಾಜ್ಯ ಸರ್ಕಾರಕ್ಕೆ ಬಸವರಾಜ ಬೊಮ್ಮಾಯಿ ಆಗ್ರಹ

Prasthutha|

ಬೆಂಗಳೂರು: ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಮೊದಲು ನಿಲ್ಲಿಸಿ. ನಂತರ ಕೋರ್ಟ್​​ನಲ್ಲಿ ವಾದ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- Advertisement -

 ನಗರದಲ್ಲಿ ಮಾತನಾಡಿದ ಅವರು, ನಾವು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿಲ್ಲ, ಕಾಂಗ್ರೆಸ್ ಸರ್ಕಾರವೇ ಸಿಲುಕಿಸಿದೆ. ಕುಡಿಯುವ ನೀರಿನ ವಿಚಾರದಲ್ಲಿ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದರು.

ಕಾವೇರಿ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮಾಡಿ ನೀರು ಬಿಡಿಸುತ್ತಾ ಇದ್ದರು. ಯಾಕೆ ನಮ್ಮವರು ಈ ವಿಷಯವನ್ನು ಸಮಗ್ರವಾಗಿ ವಾದ ಮಾಡುತ್ತಿಲ್ಲ ಅಂತ ಗೊತ್ತಾಗುತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಷ್ಟು ಮಳೆ ಬಿದ್ದಿದೆ? ಇದನ್ನು ಮನವರಿಕೆ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ನೋಡಿ ವಾದ ಮಾಡುವಂತದ್ದು ಅನಿವಾರ್ಯ ಎಂದರು.

- Advertisement -

ಸೆಪ್ಟೆಂಬರ್ 6 ರಂದು ಕೋರ್ಟ್ ಇದೆ. ಆದರೆ ನೀರು ಹರಿತಾನೆ ಇದೆ. ಹೀಗಾಗಿ, ಮೊದಲು ನೀರು ನಿಲ್ಲಿಸಿ ಆಮೇಲೆ ವಾದ ಮಾಡಿ. ನಮ್ಮ ರೈತರ ಹಿತಾಸಕ್ತಿ ಕಾಪಾಡುವುದು ಮುಖ್ಯ. ನೀವು ತಮಿಳುನಾಡು ಎಷ್ಟು ನೀರು ಬಳಕೆ ಮಾಡಿದೆ ಅಂತ ವಾದ ಮಾಡಲು ತಯಾರಿಲ್ಲ ಎಂದರು.

Join Whatsapp