ಬಸವಣ್ಣ ಪಠ್ಯ ತಿದ್ದುಪಡಿ ನೋಡಿ ಎದೆಗೆ ಕಲ್ಲು ಹೊಡೆದಂತಾಗಿದೆ: ಜಯಮೃತ್ಯುಂಜಯ ಸ್ವಾಮೀಜಿ

Prasthutha|

ಚಿತ್ರದುರ್ಗ: ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಮತ್ತಿಬ್ಬರು ಮಠಾಧಿಪತಿಗಳು ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವಿರುದ್ಧ ಧ್ವನಿಯೆತ್ತಿದ ಬೆನ್ನಲ್ಲೇ, ಬಸವಣ್ಣನವರ ಕುರಿತಾಗಿ ಪಠ್ಯದಲ್ಲಿ ಮಾಡಿರುವ ತಿದ್ದುಪಡಿಗಳು ಸಮಂಜಸವಾಗಿಲ್ಲ, ಬಸವಣ್ಣ ಪಠ್ಯ ತಿದ್ದುಪಡಿ ನೋಡಿ ಎದೆಗೆ ಕಲ್ಲು ಹೊಡೆದಂತಾಗಿದೆ ಎಂದು ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ನಾಗೇಶ್‌ ಅವರಿಗೆ ಪತ್ರ ಬರೆದಿರುವ ಸಾಣೆಹಳ್ಳಿ ಶ್ರೀಗಳು, 12ನೇ ಶತಮಾನದ ಬಸವಣ್ಣ ಮತ್ತು ಶರಣರ ವಿಚಾರವಾಗಿಯೂ ಪಠ್ಯದಲ್ಲಿ ಹಲವು ದೋಷಗಳಿದ್ದು ಇವುಗಳ ಪರಿಷ್ಕರಿಸಬೇಕು. ಇಲ್ಲವೇ ಕಳೆದ ವರ್ಷದ ಪಠ್ಯಪುಸ್ತಕವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಯುವುದು ಅನಿವಾರ್ಯ ಎಂದು ಶ್ರೀಗಳು ಎಚ್ಚರಿಸಿದ್ದಾರೆ



Join Whatsapp