ಬೆಂಗಳೂರು: ವಿಧಾನ ಸಭೆಯಲ್ಲಿ ಇಂದು ಗದ್ದಲ, ಆಕ್ರೋಶ, ರೇಗಾಟ-ಚೀರಾಟ-ಹಾರಾಟ, ಮಾತು-ಪ್ರತಿಮಾತು, ಬೈಗುಳ-ಪ್ರತಿಬೈಗುಳ-ಇವೇ ನಡೆದಿದ್ದು. ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಬಳಿಕ ಪಕ್ಷದ ನಾಯಕರು ಧರಣಿಗೆ ಕುಳಿತರು.
ಈ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದೊಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಮಾರ್ಷಲ್ ಗಳ ಎಳೆದಾಟದಲ್ಲಿ ಅವರು ಬಸವಳಿದು ಕುಸಿದು ಬಿದ್ದರು. ಕೂಡಲೇ ವಿಜಯಪುರ ಶಾಸಕರನ್ನು ವ್ಹೀಲ್ ಚೇರ್ ನಲ್ಲಿ ಕೂರಿಸಿ ವಿಧಾನ ಸೌಧ ಆವರಣದಲ್ಲಿ ನಿಂತಿದ್ದ ಅಂಬ್ಯುಲೆನ್ಸ್ ವರೆಗೆ ತಳ್ಳಿಕೊಂಡು ಬಂದು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಯತ್ನಾಳ್ ಅವರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. “ಶಾಸಕರ ರಕ್ತದೊತ್ತಡ ಹೆಚ್ಚಾಗಿದೆ. ಅವರಿಗೆ ಯಾವುದೇ ತೊಂದರೆಯಿಲ್ಲ, 24 ಗಂಟೆಗಳ ಕಾಲ ಅಬ್ಸರ್ವೇಶನ್ ನಲ್ಲಿ ಇಡಲಾಗಿದೆ” ಎಂದು ಅಲ್ಲಿನ ವೈದ್ಯರೊಬ್ಬರು ಹೇಳಿದ್ದಾರೆ.