ಬ್ಯಾರಿ ಅಕಾಡೆಮಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಬ್ಯಾರಿ ಭಾಷಣ ಸ್ಪರ್ಧೆ

Prasthutha|

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನ ಸಾಮರ್ಥ್ಯ ಸೌಧದ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ನಡೆಯಲಿದೆ.

- Advertisement -

ಮಹಿಳಾ ದಿನಾಚರಣೆಯ ಅಂಗವಾಗಿ ಅಕಾಡೆಮಿ ವತಿಯಿಂದ ಬ್ಯಾರಿ ಭಾಷಣ ಸ್ಪರ್ಧೆಯು (1) ಸಾರ್ವಜನಿಕ ಮಹಿಳೆಯರಿಗೆ ಹಾಗೂ (2) ಹೈಸ್ಕೂಲ್, ಪಿ.ಯು.ಸಿ., ಮತ್ತು ಪದವಿ ವಿದ್ಯಾರ್ಥಿನಿಯರಿಗೆ ಎರಡು ವಿಭಾಗದಲ್ಲಿ ನಡೆಯಲಿದೆ. ಹೈಸ್ಕೂಲ್, ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಥಿನಿಯರಿಗೆ ʼಇಂಡತ್ತೊ ಮಕ್ಕ ನಾಲೆರೊ ಭವಿಷ್ಯʼ ಎಂಬ ವಿಷಯದಲ್ಲಿ ಮತ್ತು ಸಾರ್ವಜನಿಕ ಮಹಿಳೆಯರಿಗೆ ʼದೇಶತ್ತೊ ಏಳಿಗೆಲ್ ಪೆನ್ನಿಙʼ ಎಂಬ ವಿಷಯದಲ್ಲಿ ಬ್ಯಾರಿ ಭಾಷಣ ಸ್ಪರ್ಧೆಯು ನಡೆಯಲಿದೆ.

ಈ ಎರಡು ವಿಭಾಗದ ಸ್ಪರ್ಧೆಯ ವಿಜೇತರಿಗೆ ಪ್ರಥಮ ತಲಾ ರೂ.1,500, ದ್ವಿತೀಯ ರೂ.1,000, ತೃತೀಯ ರೂ.750 ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯು ಬೆಳಿಗ್ಗೆ ಗಂಟೆ 11.00ರಿಂದ ಮಧ್ಯಾಹ್ನ ಗಂಟೆ 1:00ರ ತನಕ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

ಸ್ಪರ್ಧೆಯ ನಿಯಮಗಳು:-

•             ಎಲ್ಲಾ ಸಾರ್ವಜನಿಕರಿಗೆ ಮಹಿಳೆಯರಿಗೆ ಹಾಗೂ ಹೈಸ್ಕೂಲ್, ಪಿ.ಯು.ಸಿ. ಪದವಿ ವಿದ್ಯಾರ್ಥಿನಿಯರಿಗೆ ಮುಕ್ತ ಅವಕಾಶ.

•             ಎಲ್ಲಾ ಭಾಷೆ ಮತ್ತು ಧರ್ಮದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

•             ಭಾಷಣವು ಬ್ಯಾರಿ ಭಾಷೆಯಲ್ಲಿಯೇ ಇರತಕ್ಕದ್ದು.

•             ಸ್ಪರ್ಧೆಯ ಅವಧಿಯು ಮೂರು ನಿಮಿಷಕ್ಕೆ ಸೀಮಿತ.

•             ದಿನಾಂಕ:02.03.2022ರೊಳಗಾಗಿ ದೂರವಾಣಿ ಸಂಖ್ಯೆ 7483946578 ಅಥವಾ 08242412297 (ಕಚೇರಿ ಸಮಯದಲ್ಲಿ) ಕರೆ ಮಾಡಿ ನೊಂದಾವಣೆ ಮಾಡಿಕೊಳ್ಳಬೇಕು, ನಂತರ ಬಂದ ಯಾವುದೇ ಹೆಸರನ್ನು ಪರಿಗಣಿಸಲಾಗುವುದಿಲ್ಲ.

•             ಅಕಾಡೆಮಿಯ ವಿಚಾರದಾರೆಗೆ ವಿರುದ್ಧವಾದ ಮತ್ತು ಸೌಹಾರ್ದತೆಗೆ ಕುಂದುಂಟಾಗುವ ಯಾವುದೇ ಭಾಷಣವನ್ನು ಪರಿಗಣಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ರಹೀಮ್ ಉಚ್ಚಿಲ್ ತಿಳಿಸಿದ್ದಾರೆ.



Join Whatsapp