ಎಐಎಂಐಎಂ ನಾಯಕನ ಬರ್ಬರ ಹತ್ಯೆ

Prasthutha|

ಪಾಟ್ನಾ: ಎಐಎಂಐಎಂ ನಾಯಕ ಆರಿಫ್ ಜಮಾಲ್‌ರವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಹುಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುತುಬ್ ಛಾಪ್ರಾ ತಿರುವಿನಲ್ಲಿ ಘಟನೆ ನಡೆದಿದೆ. ಆರಿಫ್ ಜಮಾಲ್ ತನ್ನ ಅಂಗಡಿಯಲ್ಲಿ ಕುಳಿತಿದ್ದ ಸಮಯದಲ್ಲಿ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

- Advertisement -

ರಾತ್ರಿ 8.30ರಿಂದ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಗೊಂಡಿದ್ದ ಆರಿಫ್ ಜಮಾಲ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಆರಿಫ್ ಜಮಾಲ್ 2015 ರಲ್ಲಿ ಅವರು ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ರ್ಪಧಿಸಿ ಸೋತಿದ್ದರು. ಇದಾದ ಬಳಿಕ 2022ರ ಜಿಲ್ಲಾ ಪರಿಷತ್ ಚುನಾವಣೆಗೂ ಸ್ರ್ಪಧಿಸಿದ್ದರು.



Join Whatsapp