ಬಂಟ್ವಾಳ: ಮಸೀದಿ ಮುಂದೆ ಪಟಾಕಿ‌ ಸಿಡಿಸಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

Prasthutha|

ಬಂಟ್ವಾಳ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಚುನಾವಣೆಯಲ್ಲಿ‌ ಗೆಲುವು ಸಾಧಿಸಿದ್ದು,‌ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರು ಕರೊಪಾಡಿ ಗ್ರಾಮದ ಗುಂಡಮಜಲ್ ಎಂಬಲ್ಲಿ ಮಸೀದಿ ಮುಂಭಾಗ ಮುಸ್ಲಿಮರನ್ನು ಪ್ರಚೋದಿಸುವ ರೀತಿಯಲ್ಲಿ ವರ್ತಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಮಸೀದಿ ಮುಂಭಾಗ ಚೌಟ, ಕೋಟಾ ಪರ ಘೋಷಣೆ ಕೂಗಿದ್ದಲ್ಲದೆ, ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಕುಣಿದಿದ್ದಾರೆ. ಮುಸ್ಲಿಮರನ್ನು ಪ್ರಚೋದಿಸಲೇ ಈ ಕೃತ್ಯವೆಸಗಿರುವ ಶಂಕೆ ಮೂಡಿದ್ದು, ಘಟನೆಗೆ ವ್ಯಾಪಕ‌ ಆಕ್ರೋಶ ವ್ಯಕ್ತವಾಗಿದೆ.

ಮಸೀದಿ ಮುಂಭಾಗ ಈ ರೀತಿ ವರ್ತಿಸಿದವರ ವಿರುದ್ಧ ಯಾಕೆ ಪೊಲೀಸರು ಸ್ವಯಂ ಪ್ರೇರಿತ ಕೇಸ್ ಹಾಕಿಲ್ಲ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಪೊಲೀಸರು ಇದರ ವಿರುದ್ಧ ಸುಮೊಟೊ ಕೇಸ್ ದಾಖಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

- Advertisement -

ಪ್ರಚೋದನೆ ಮಾಡಲೆಂದೇ ಮತ ಎಣಿಕೆ ಮುಗಿದು 24 ಗಂಟೆಗಳ ಬಳಿಕ ಈ ರೀತಿ ಮಾಡಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಮಸೀದಿ ಆಡಳಿಯ ಮಂಡಳಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Join Whatsapp