ಬಂಟ್ವಾಳ: ಮಾಧ್ಯಮದ ವಾಹನಕ್ಕೆ ಅಡ್ಡಿಪಡಿಸಿ ಹಣ ಸಂಗ್ರಹದ ಹೆಸರಿನಲ್ಲಿ ಟೋಲ್ ಗೇಟ್ ಸಿಬ್ಬಂದಿ ರೌಡಿಸಂ

Prasthutha|

ಬಂಟ್ವಾಳ: ಟೋಲ್ ಸಂಗ್ರಹದ ಹೆಸರಿನಲ್ಲಿ ಮಾಧ್ಯಮದ ವಾಹನಕ್ಕೆ ಅಡ್ಡಿಪಡಿಸಿ ರೌಡಿಸಂ ತೋರಿದ ಘಟನೆ ಬ್ರಹ್ಮರಕೂಟ್ಲು ಟೋಲ್ ಗೇಟ್’ನಲ್ಲಿ ನಡೆದಿದ್ದು, ಟೋಲ್ ಸಿಬ್ಬಂದಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -


ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಇದಲ್ಲದೆ, ಈ ಹಿಂದೆಯೂ ಕೂಡ ಅಲ್ಲಿನ ಸಿಬ್ಬಂದಿ ವಾಹನ ಸವಾರರಿಗೆ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿರುವ ನಿದರ್ಶನಗಳು ನಡೆದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಾರ್ಯನಿಮಿತ್ತ ಮಾಧ್ಯಮ ಸಂಸ್ಥೆಯೊಂದರ ಸಿಬ್ಬಂದಿ ಓಮ್ನಿ ಕಾರಿನಲ್ಲಿ ಬರುತ್ತಿದ್ದಾಗ ಟೋಲ್ ಸಿಬ್ಬಂದಿ ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿರುವುದು ವೀಡಿಯೋದಲ್ಲಿದೆ.

- Advertisement -


ಇತ್ತೀಚೆಗೆಗಷ್ಟೇ ಎಸ್’ಡಿಪಿಐ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಬ್ರಹ್ಮರಕೂಟ್ಲು ಟೋಲ್ ಗೇಟ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ್ದರು. ಮಾತ್ರವಲ್ಲ ಪತ್ರಿಕಾಗೋಷ್ಠಿ ನಡೆಸಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಂಪೂರ್ಣವಾಗಿ ಅವೈಜ್ಞಾನಿಕತೆಯಿಂದ ಕೂಡಿದ್ದು ಅದೊಂದು ಹಣ ಸುಲಿಗೆಯ ಕೇಂದ್ರದಂತಿದೆ. ಮಳೆಗಾಲ ಆರಂಭವಾದ ಬಳಿಕ ಟೋಲ್ ಗೇಟ್ ನ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿದ್ದು ಬೃಹತ್ ಹೊಂಡಗಳು ಬಿದ್ದಿವೆ. ಆದರೂ ಈ ವರೆಗೆ ಅದನ್ನು ದುರಸ್ತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Join Whatsapp