ಬಂಟ್ವಾಳ: ನಿವೃತ್ತ ಶಿಕ್ಷಕಿಗೆ ಹಳೆ ವಿದ್ಯಾರ್ಥಿಗಳಿಂದ ಚಿನ್ನದ ಉಡುಗೊರೆ

Prasthutha|

ಬಂಟ್ವಾಳ: ಪಾಣೆಮಂಗಳೂರಿನ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಜಯಲಕ್ಷ್ಮಿ ಭಟ್ ಗೆ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಚಿನ್ನದ ಉಡುಗೊರೆಯನ್ನು ನೀಡಿದ್ದಾರೆ.

- Advertisement -


4 ಪವನ್ ಚಿನ್ನ ಮತ್ತು ಸುಮಾರು 20ಕ್ಕೂ ಹೆಚ್ಚು ವೈಯಕ್ತಿಕ ಉಡುಗೊರೆ, ಪ್ರಶಸ್ತಿ, ಹೂವು ಹಂಪಲುಗಳನ್ನು ನೀಡಿ ಸಂತಸದಿಂದ ನೆಚ್ಚಿನ ಅಧ್ಯಾಪಕಿಗೆ ಬೀಳ್ಕೊಟ್ಟಿದ್ದಾರೆ.


ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ದಾರುಲ್ ಇಸ್ಲಾಂ ಶಾಲೆಯ ಜಯಲಕ್ಷ್ಮಿ ಟೀಚರ್ ವಿದ್ಯಾರ್ಥಿಗಳನ್ನು ಸಮಾನತೆಯಿಂದ ಕಂಡು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದಾರೆ.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು ‘ಈ ಶಾಲೆಯನ್ನು ನನ್ನ ಕುಟುಂಬಕ್ಕಿಂತಲೂ ಹೆಚ್ಚು ಪ್ರೀತಿಸಿದ್ದೇನೆ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿ ದಾರುಲ್ ಇಸ್ಲಾಂ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳಯಬೇಕು ಎಂಬುದು ನನ್ನ ಆಶಯ, ಸೇವೆಯಲ್ಲಿದ್ದಾಗ ಸಹಕರಿಸಿದ ಎಲ್ಲಾ ಸಹ ಅಧ್ಯಾಪಕರು, ಪೋಷಕರು, ಶಾಲಾಡಳಿತ ಮಂಡಳಿಯವರು, ವಿದ್ಯಾರ್ಥಿಗಳಿಗೆ ಧನ್ಯವಾದಗಳು ಎಂದು ಹೇಳಿದರು.

- Advertisement -

ಕಳೆದ ಬಾರಿ ನಿವೃತ್ತರಾದ ಮುಖ್ಯೋಪಾಧ್ಯಾಯ ಫಕ್ರುದ್ದೀನ್ ಬಿ ಕೆ ಅವರಿಗೆ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳು ಕಾರು ಉಡುಗೊರೆ ನೀಡಿದ್ದರು. ಅಲ್ಲದೇ ಈ ಪರಿಸರದಲ್ಲಿ ಶಾಲೆಯಲ್ಲಿ ಸಾಕ್ಷರತೆಯ ಹೆಚ್ಚಿಸಲು ಸ್ವತಃ ಅಧ್ಯಾಪಕರೇ ವ್ಯಾನ್ ಮೂಲಕ ಮಕ್ಕಳನ್ನು ಮನೆಯಿಂದ ಉಚಿತವಾಗಿ ಕರೆತಂದು ಸಂಜೆ ಮನೆಗೆ ಮುಟ್ಟಿಸುವ ಅಪರೂಪದ ಕಾರ್ಯ ಮಾಡುವುದು ವಿಶೇಷವಾಗಿದೆ. ಇದು ಈ ಹಿಂದೆ ಬಾರಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು.

Join Whatsapp