ಬಂಟ್ವಾಳ: ಮುಸ್ಲಿಮ್ ಯುವಕನಿಗೆ ತಂಡದಿಂದ ಹಲ್ಲೆ

Prasthutha|

ಬಂಟ್ವಾಳ: ಮುಸ್ಲಿಮ್ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಮೈಂದಾಳದಲ್ಲಿ ನಡೆದಿದೆ.

- Advertisement -

ಮೈಂದಾಳ ನಿವಾಸಿ ನಿಸಾರ್ ಎಂಬವರಿಗೆ ತಂಡ ಹಲ್ಲೆ ನಡೆಸಿದೆ.

ನಿಸಾರ್ ಶನಿವಾರ ರಾತ್ರಿ ರಸ್ತೆ ಬದಿ ನಡೆದುಕೊಂಡು ಹೋಗುವಾಗ ಮೈಂದಾಳ ಸೇತುವೆ ಬಳಿಯ ಗುರಿಮಜಲು ಎಂಬಲ್ಲಿ ತಂಡವೊಂದು ಅಡ್ಡ ಗಟ್ಟಿ ಹಲ್ಲೆ ನಡೆಸಿದೆ. ತಲವಾರು ಹಿಡಿದುಕೊಂಡು ನಿಂತಿದ್ದ ಮೂವರ ಪೈಕಿ ಓರ್ವ ನಿಸಾರ್ ಗೆ ದಾಳಿ ಮಾಡುವಂತೆ ಹೇಳುತ್ತಿದ್ದ ಸಂದರ್ಭ ನಿಸಾರ್ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿ ಓಡಿ ಹೋಗಿದ್ದಾರೆ.

- Advertisement -

ನಿಸಾರ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp