ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್’ಗೆ ಮಾತೃವಿಯೋಗ

Prasthutha|

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ತಾಯಿ ಸರೋಜಿನಿ ನಾಯ್ಕ್ ಸೋಮವಾರ ನಿಧನರಾಗಿದ್ದಾರೆ.

- Advertisement -


ಅವರಿಗೆ 90 ವಯಸ್ಸಾಗಿತ್ತು. ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.


ಸರೋಜಿನಿ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಗಂಟೆಗೆ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -


ಸರೋಜಿನಿ ಅವರು ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ.ರಮೇಶ್ ನಾಯ್ಕ್ ಅವರ ಪತ್ನಿಯಾಗಿದ್ದಾರೆ.



Join Whatsapp