ಬಂಟ್ವಾಳ | ಕಾರು – ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Prasthutha|

ಬಂಟ್ವಾಳ: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ.

- Advertisement -


ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕನಾಗಿದ್ದು, ಈತನ ಜೊತೆ ಕೆಲಸ ಮಾಡುವ ನೆರೆಯ ಮನೆಯ ಆಕಾಶ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇನ್ನು ಇವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಬಿಸಿರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀವೇಗದ ಬಂದ ಕಾರು ಢಿಕ್ಕಿ ಹೊಡೆದಿದೆ.

- Advertisement -


ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp