ಬಂಟ್ವಾಳ| SDPI ವತಿಯಿಂದ ಬೂತ್ ಜೋಡೋ ಕಾರ್ಯಕ್ರಮ

Prasthutha|

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ( SDPI) ಬಂಟ್ವಾಳ ಪುರಸಭಾ ವ್ಯಾಪ್ತಿಯ ತಲಪಾಡಿ,ರಂಗೇಲ್ ಮತ್ತು ಬಂಟ್ವಾಳ ಕೆಳಗಿನಪೇಟೆ ಬೂತ್ ಸಮಿತಿ ವತಿಯಿಂದ ಬೂತ್ ಜೋಡೋ ಕಾರ್ಯಕ್ರಮ ನಡೆಯಿತು.

- Advertisement -


ಬಂಟ್ವಾಳ ಕೆಳಗಿನಪೇಟೆಯಲ್ಲಿ ನಡೆದ ಸಭೆಯಲ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮುನೀಶ್ ಆಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಆಗಮಿಸಿ ಬೂತ್ ಜೋಡೊ ಕಾರ್ಯಕ್ರಮ, ಪಕ್ಷ ಸಂಘಟಣೆಯ ಕುರಿತು ಮಾಹಿತಿ ನೀಡಿದರು.


ವೇದಿಕೆಯಲ್ಲಿ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರ್, ಪುರಸಭಾ ಸಮಿತಿ ಸದಸ್ಯ ಇಮ್ರಾನ್ ಬಂಟ್ವಾಳ, ಬೂತ್ ಸಮಿತಿ ಅದ್ಯಕ್ಷ ಖುರ್ಷಿದ್, ಕಾರ್ಯದರ್ಶಿ ಸಾಬಿತ್ ಬಂಟ್ವಾಳ,ಮತ್ತು ಪಕ್ಷದ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಳಗಿನಪೇಟೆ ಬೂತ್ ಸಮಿತಿ ಸಭೆಗೆ ಆಗಮಿಸಿದ ಇಲ್ಯಾಸ್ ಮುಹಮ್ಮದ್ ತುಂಬೆಯವರನ್ನು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು.

- Advertisement -

ತಲಪಾಡಿಯಲ್ಲಿ ನಡೆದ ಬೂತ್ ಸಮಿತಿ ಸಭೆಗೆ ಆಗಮಿಸಿದ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಮುಂದಿನ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಿ ಸವಿಸ್ತಾರವಾಗಿ ವಿವರಿಸಿದರು.ಕ್ಷೇತ್ರ ಚುನಾವಣಾ ಉಸ್ತುವಾರಿ ಶಾಹುಲ್ ಹಮೀದ್ ಎಸ್ ಎಚ್ ಸಮಾರೋಪ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿ, ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರ್, ಪುರಸಭಾ ಸಮಿತಿ ಸದಸ್ಯ ಶಾಹುಲ್ ತಲಪಾಡಿ, ಬೂತ್ ಸಮಿತಿ ಅಧ್ಯಕ್ಷ ಲತೀಫ್ ಬಿ ಸಿ, ಕಾರ್ಯದರ್ಶಿ ಅನ್ವರ್ ಕೆ ಎಚ್ ಮತ್ತು ಬೂತ್ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

ರಂಗೇಲ್ ನಲ್ಲಿ ನಡೆದ ಬೂತ್ ಸಮಿತಿ ಸಭೆಗೆ ವೀಕ್ಷಕರಾಗಿ ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿ ಭೇಟಿ ನೀಡಿ ಬೂತ್ ಜೋಡೋ ಅಭಿಯಾನದ ಉದ್ದೇಶ, ಪಕ್ಷ ಸಂಘಟನೆ ಮತ್ತು ಮುಂದಿನ ಚುನಾವಣೆಯ ಕಾರ್ಯತಂತ್ರದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಬೂತ್ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp