ಫೆಬ್ರವರಿಯಲ್ಲಿ 12 ದಿನ ಬ್ಯಾಂಕ್ ಬಂದ್ । ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ

Prasthutha|

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಫೆಬ್ರವರಿ ತಿಂಗಳ ರಜಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಭಾರತೀಯ ಎಲ್ಲಾ ವಾಣಿಜ್ಯ ಮತ್ತು ಸರ್ಕಾರಿ ಬ್ಯಾಂಕ್ ಗಳು 12 ದಿನ ಬಂದ್ ಆಗಲಿವೆ. ಈ ವೇಳೆ ಇ – ಬ್ಯಾಂಕಿಂಗ್ ಮತ್ತು ಎ.ಟಿ.ಎಂ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಆರ್.ಬಿ.ಪಿ ತಿಳಿಸಿದೆ.

- Advertisement -

ಪೆಬ್ರವರಿಯ ಈ ಕೆಳಗಿನ ದಿನಗಳಲ್ಲಿ ಬ್ಯಾಂಕ್ ಮುಚ್ಚಲ್ಪಡುತ್ತವೆ:

1) ಫೆಬ್ರವರಿ 2, ಸೋನಮ್ ಲೋಚರ್ ಹಬ್ಬದ ಪ್ರಯುಕ್ತ ಎಲ್ಲಾ ಬ್ಯಾಂಕ್ ಗಳು ಮುಚ್ಚಲ್ಪಡುತ್ತದೆ.
2) ಪಂಚಮಿ, ಸರಸ್ವತಿ ಪೂಜೆ, ಬಸಂತ್ ಪಂಚಮಿ ಪ್ರಯುಕ್ತ ಫೆಬ್ರವರಿ 5 ರಂದ್ಯ್ ಭುವನೇಶ್ವರ್, ಅಗರ್ತಲಾ ಮತ್ತು ಕೋಲ್ಕತ್ತಾ ಬ್ಯಾಂಕ್ ಗಳು ಬಂದ್ ಆಗಲಿವೆ.
3) ಮುಹಮ್ಮದ್ ಹಝರತ್ ಅಲಿ, ಲೂಯಿಸ್ – ನಾಗೈ ಜನ್ಮದಿನದ ಗೌರವಾರ್ಥವಾಗಿ ಫೆಬ್ರವರಿ 15 ರಂದು ಕಾನ್ಪುರ, ಲಕ್ನೋ ಮತ್ತು ಇಂಪಾಲದಲ್ಲಿನ ಬ್ಯಾಂಕ್ ಮುಚ್ಚುತ್ತದೆ
4) ಗುರು ರವಿದಾಸ್ ಜಯಂತಿಯ ಪ್ರಯುಕ್ತ ಫೆಬ್ರವರಿ 16 ರಂದು ಚಂಡೀಗಢದ ಬ್ಯಾಂಕ್ ಬಂದ್ ಆಗಲಿದೆ.
5) ಡೋಲ್ಜಾತ್ರಾ ಹಬ್ಬದ ಪ್ರಯುಕ್ತ ಕೋಲ್ಕತ್ತಾ ಬಾಂಕ್ ಫೆಬ್ರವರಿ 18 ರಂದು ತನ್ನ ಸೇವೆಯನ್ನು ನಿಲ್ಲಿಸಲಿದೆ.
6) ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ಮುಂಬೈ, ನಾಗ್ಪುರ ಮತ್ತು ಬೇಲಾಪುರದ ಎಲ್ಲಾ ಬ್ಯಾಂಕ್ ಬಂದ್

- Advertisement -

ಇದರ ಹೊರತಾಗಿ ಫೆಬ್ರವರಿ 6, 13, 20 ಮತ್ತು 27 ರ ದಿನ ಭಾನುವಾರವಾಗಿದ್ದು, ಅಂದು ಬಂದ್ ಆಗಿದೆ ಮತ್ತು ಫೆಬ್ರವರಿ 12 ಮತ್ತು 26 ರಂದು ಎರಡನೇ, ನಾಲ್ಕನೇ ಶನಿವಾರ ಆದ ಕಾರಣ ಎಲ್ಲಾ ಬ್ಯಾಂಕ್ ಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಪ್ರಕಟನೆಯಲ್ಲಿ ಘೋಷಿಸಿದೆ



Join Whatsapp