ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ರಜಾ ಪಟ್ಟಿಯಲ್ಲಿ, ಆಗಸ್ಟ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಗಮನಾರ್ಹವಾಗಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ರಾಷ್ಟ್ರೀಯ ರಜಾ ದಿನಗಳ ಜೊತೆಗೆ, ಕೆಲವು ರಾಜ್ಯಗಳ ನಿರ್ದಿಷ್ಟ ರಜಾ ದಿನಗಳೂ ಇದರಲ್ಲಿ ಒಳಗೊಂಡಿದ್ದು, ಇದರಲ್ಲಿ ಎಲ್ಲಾ ಭಾನುವಾರಗಳು ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಕೂಡಾ ಸೇರಿವೆ.
ಆಗಸ್ಟ್ ತಿಂಗಳಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಅದರಲ್ಲೂ ಮುಖ್ಯವಾಗಿ ಸ್ವಾತಂತ್ರ್ಯ ದಿನ, ರಕ್ಷಾಬಂಧನ, ಜನ್ಮಾಷ್ಟಮಿ ಇದರ ಜೊತೆಗೆ ಶನಿವಾರ ಭಾನುವಾರದ ರಜೆಯೂ ಇದರಲ್ಲಿ ಒಳಗೊಂಡಿದೆ. ಹಾಗಾಗಿ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವುದಿದ್ದರೆ, ಮೊದಲೇ ಹಣಕಾಸಿನ ಯೋಜನೆಗಳಿಗೆ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ.
ಆಗಸ್ಟ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.
1 ಆಗಸ್ಟ್ 2022 – ದ್ರುಪಕಾ ಶೀ-ಜಿ ಹಬ್ಬ
7 ಆಗಸ್ಟ್ 2022 – ಭಾನುವಾರ
8, 9 ಆಗಸ್ಟ್ 2022 – ಮುಹರಂ
11 ಆಗಸ್ಟ್ 2022 – ರಕ್ಷಾಬಂಧನ
13 ಆಗಸ್ಟ್ 2022 – ಎರಡನೇ ಶನಿವಾರ
14 ಆಗಸ್ಟ್ 2022-ಭಾನುವಾರ
15 ಆಗಸ್ಟ್ 2022-ಸ್ವಾತಂತ್ರ್ಯ ದಿನಾಚರಣೆ
16 ಆಗಸ್ಟ್ 2022 – ಪಾರ್ಸಿ ಹೊಸ ವರ್ಷ(ಮುಂಬೈ ಮತ್ತು ನಾಗ್ಪುರದಲ್ಲಿ ರಜೆ)
18 ಆಗಸ್ಟ್ 2022 – ಜನ್ಮಾಷ್ಟಮಿ
21 ಆಗಸ್ಟ್ 2022-ಭಾನುವಾರ
28 ಆಗಸ್ಟ್ 2022-ಭಾನುವಾರ
ಆಗಸ್ಟ್ 31, 2022 – ಗಣೇಶ ಚತುರ್ಥಿ(ಗುಜರಾತ್, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ)