ಏಪ್ರಿಲ್ ತಿಂಗಳಿನಲ್ಲಿ 15 ದಿನ ಬ್ಯಾಂಕುಗಳಿಗೆ ರಜೆ

Prasthutha|

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರುತ್ತದೆ.


ಏಪ್ರಿಲ್ 1ರಂದು ಬ್ಯಾಂಕ್’ಗಳ ವಾರ್ಷಿಕ ಕ್ಲೋಸಿಂಗ್ ಹಿನ್ನಲೆಯಲ್ಲಿ ರಜೆ ಇರುತ್ತದೆ. ಏಪ್ರಿಲ್ 2 ಭಾನುವಾರ ದೇಶಾದ್ಯಂತ ರಜೆ. ಏಪ್ರಿಲ್ 4ರಂದು ಮಹಾವೀರ ಜಯಂತಿ. ಏಪ್ರಿಲ್ 5 ಬಾಬು ಜಗ್ ಜೀವನ್’ರಾಮ್ ಜನ್ಮದಿನ, ಹೈದರಾಬಾದ್’ನಲ್ಲಿ ಬ್ಯಾಂಕ್’ಗಳಿಗೆ ರಜೆ. ಏಪ್ರಿಲ್ 7ರಂದು ಗುಡ್ ಫ್ರೈಡೆ. ಏಪ್ರಿಲ್ 8ರಂದು 2ನೇ ಶನವಾರವಾಗಿದ್ದು, ಬ್ಯಾಂಕ್’ಗಳು ತೆರೆದಿರುವುದಿಲ್ಲ. ಏಪ್ರಿಲ್ 9ರಂದು ಭಾನುವಾರ ಬ್ಯಾಂಕ್’ಗಳಿಗೆ ರಜೆ. ಏಪ್ರಿಲ್ 14ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ. ಅಜ್ವಾಲ್, ಭೋಪಾಲ್, ನವದೆಹಲಿ, ರಾಯಪುರ, ಶಿಲ್ಲಾಂಗ್, ಶಿಮ್ಲಾ ಹೊರತುಡಿಸಿ ಉಳಿದ ಕಡೆ ಬ್ಯಾಂಕ್ ಬಂದ್ ಆಗಿರುತ್ತದೆ.

- Advertisement -


ಏಪ್ರಿಲ್ 15ರಂದು ಅಗರ್ತಾಲ, ಗೌಹಾತಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ, ತಿರುವನಂತಪುರಂನಲ್ಲಿ ವಿಷು ಹಬ್ಬದ ಪ್ರಯುಕ್ತ ಬ್ಯಾಂಕ್ ಗಳಿಗೆ ರಜೆ. ಇದೇ ದಿನ ಬೊಹಾಂಗ್ ಬಿಹು, ಹಿಮಾಚಲ ದಿನ, ಬೆಂಗಾಳಿ ಹೊಸ ವರ್ಷದ ಹಿನ್ನಲೆ ಬ್ಯಾಂಕುಗಳು ಬಂದ್. ಏಪ್ರಿಲ್ 16ರಂದು ಭಾನುವಾರ ವಾರದ ರಜೆ ಕಾರಣ ದೇಶಾದ್ಯಂತ ಬ್ಯಾಂಕ್ ಬಂದ್. ಏಪ್ರಿಲ್ 18ರಂದು ಶಾಬ್-ಇ-ಕ್ವಾದ್ರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಾಗಿಲು ಮುಚ್ಚಿರಲಿದೆ.


ಏಪ್ರಿಲ್ 21ರಂದು ಈದ್-ಉಲ್-ಫಿತ್ರ್. ಏಪ್ರಿಲ್ 22ರಂದು ಈದ್-ಉಲ್-ಫಿತ್ರ್ ಪ್ರಯುಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇದೆ. ಅಂದು 2ನೇ ಶನಿವಾರವಾರವೂ ಹೌದು. ಏಪ್ರಿಲ್ 23 ವಾರದ ರಜೆ. ಏಪ್ರಿಲ್ 30 ಭಾನುವಾರ ವಾರದ ರಜೆ ಪ್ರಯುಕ್ತ ಬ್ಯಾಂಕ್ ಬಂದ್.

- Advertisement -