ಯುಎಇ ಉದ್ಯೋಗ : ಇಸ್ಲಾಮಿಕ್ ಬ್ಯಾಂಕುಗಳಲ್ಲಿ ಉದ್ಯೋಗಾವಕಾಶ | ಮಾಸಿಕ 5,000 ದಿರ್ಹಮ್ ವರೆಗೆ ವೇತನ

Prasthutha|

ಯುಎಇ ಉದ್ಯೋಗ:   ಇಸ್ಲಾಮಿಕ್ ಬ್ಯಾಂಕುಗಳಲ್ಲಿ ಉದ್ಯೋಗಾವಕಾಶ | ಮಾಸಿಕ 5,000 ದಿರ್ಹಮ್ ವರೆಗೆ ವೇತನ

ಯುಎಇಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗಾಗಿ ಉತ್ತಮ ಅವಕಾಶಗಳಿವೆ. ಪ್ರಮುಖ ಯುಎಇ ಬ್ಯಾಂಕುಗಳಲ್ಲಿನ ಮಾರಾಟ ಪ್ರತಿನಿಧಿ (Sales Representative) ಉದ್ಯೋಗಗಳಿಗಾಗಿ ಎರಡು ದಿನಗಳ ಮುಖಾಮುಖಿ ಸಂದರ್ಶನವು ಬುಧವಾರ (ಮೇ 19) ಪ್ರಾರಂಭವಾಗಲಿದ್ದು, ಮಾಸಿಕ 5,000 ದಿರ್ಹಮ್ ವೇತನ ಮತ್ತು ಸೇಲ್ಸ್ (target) ಗುರಿಗಳನ್ನು ಸಾಧಿಸವುದರೊಂದಿಗೆ ಇತರ ಪ್ರೋತ್ಸಾಹಧನ (incentives) ಗಳನ್ನು ನೀಡುತ್ತದೆ.

- Advertisement -

ಅಭ್ಯರ್ಥಿಗಳು ಇಸ್ಲಾಮಿಕ್ ಹಣಕಾಸು ಮತ್ತು ಸಾಂಪ್ರದಾಯಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯುಎಇಯಲ್ಲಿ ಕನಿಷ್ಠ ಎರಡು-ಮೂರು ವರ್ಷಗಳ, ವೈಯಕ್ತಿಕ ಸಾಲ ಮಾರಾಟ ಅನುಭವ ಹೊಂದಿರಬೇಕು, ಅತ್ಯುತ್ತಮ ಸಂವಹನ ಕೌಶಲ್ಯ ಮತ್ತು ಸಂಬಂಧವನ್ನು ಬೆಳೆಸುವ ಕೌಶಲ್ಯ ಹೊಂದಿರಬೇಕು, ತಕ್ಷಣ ಸೇರಲು ಅವರು ಲಭ್ಯವಿರಬೇಕು.

ಮಾರ್ಚ್ ತಿಂಗಳಿನಲ್ಲಿ bayt.com ನಡೆಸಿದ ಸಮೀಕ್ಷೆಯ ಪ್ರಕಾರ, ಯುಎಇಯ ಹೆಚ್ಚಿನ ಕಂಪನಿಗಳು ಪ್ರವೇಶ ಮಟ್ಟದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿವೆ, ವಿಶೇಷವಾಗಿ ಕಿರಿಯ ಕಾರ್ಯನಿರ್ವಾಹಕರು, ಆದರೆ ಮಾರಾಟ ಅಧಿಕಾರಿಗಳು, ಸ್ವಾಗತಕಾರರು ಮತ್ತು ಮಾರಾಟ ವ್ಯವಸ್ಥಾಪಕರು ಯುಎಇಯಲ್ಲಿ ಉದ್ಯೋಗದಾತರು ಈ ವರ್ಷ ಹುಡುಕುತ್ತಿರುವ ಪ್ರಮುಖ ಉದ್ಯೋಗಗಳಾಗಿವೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ 4,000 ದಿಂದ 5,000 ದಿರ್ಹಂನಷ್ಟು ವೇತನವನ್ನು ನೀಡಲಾಗುವುದು. ಆದರೆ ಉನ್ನತ ಸಾಧನೆ ಮಾಡುವ ಅಭ್ಯರ್ಥಿಗಳಿಗೆ ಈ ಮೊತ್ತವು ಮತ್ತಷ್ಟು ಹೆಚ್ಚಾಗಬಹುದು. ಹೈಸ್ಕೂಲ್ ಡಿಪ್ಲೊಮಾ ಅಥವಾ ತತ್ಸಮಾನ ಹೊಂದಿರುವ ಜನರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಅರೇಬಿಕ್ ಮತ್ತು ದ್ವಿಭಾಷಾ ಭಾಷಿಕರು ಹೆಚ್ಚಿನ ವೇತನದ ಪ್ರಯೋಜನವನ್ನು ಪಡೆಯಬಹುದು.

ವಾಕ್-ಇನ್ ಸಂದರ್ಶನಗಳು ಮೇ 19 ಮತ್ತು ಮೇ 20 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಸೂದ್ ಟವರ್ 2, ಆಫೀಸ್ ನಂ 302-304, ಅಲ್ ಫುತ್ತೈಮ್ ಟೊಯೋಟಾ ಆಟೋ ಮಾಲ್, ಪೋರ್ಟ್ ಸಯೀದ್, ದೇರಾ, ದುಬೈನಲ್ಲಿ ನಡೆಯಲಿದೆ.

ಸುದ್ದಿ ಮೂಲ : ಖಲೀಜ್ ಟೈಮ್ಸ್

- Advertisement -