ಬ್ಯಾಂಕ್ ಸಾಲದ ಕಂತು ಮರು ಪಾವತಿ ಎರಡು ವರ್ಷ ವಿಸ್ತರಿಸಬಹುದು : ಸುಪ್ರೀಂ ಕೋರ್ಟ್ ಗೆ ಕೇಂದ್ರ, ಆರ್ ಬಿಐ ಹೇಳಿಕೆ

Prasthutha|

ನವದೆಹಲಿ : ಕೊರೋನ ಹಿನ್ನೆಲೆಯಲ್ಲಿ ಆರು ತಿಂಗಳ ವರೆಗೆ ವಿಸ್ತರಿಸಿದ್ದ ಸಾಲ ಕಂತು ಮರುಪಾವತಿ ಅವಧಿಯನ್ನು ಎರಡು ವರ್ಷಗಳ ವರೆಗೆ ವಿಸ್ತರಿಸಬಹುದು ಎಂದು ಕೇಂದ್ರ ಸರಕಾರ ಹಾಗೂ ಆರ್ ಬಿಐ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಆರ್ ಬಿಐ ಮತ್ತು ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್ ಗೆ ಈ ಮಾಹಿತಿ ನೀಡಿದ್ದಾರೆ.

ಸಾಲ ಮರುಪಾವತಿಯ ವೇಳೆ ಬ್ಯಾಂಕ್ ಗಳು ವಿಧಿಸುವ ಬಡ್ಡಿಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲು ಕಾಲಾವಕಾಶ ನೀಡುವಂತೆ ಅವರು ಕೋರ್ಟಿಗೆ ಮನವಿ ಮಾಡಿದ್ದಾರೆ. ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಆರ್ ಸುಭಾಷ್ ರೆಡ್ಡಿ, ನ್ಯಾ. ಎಂ.ಆರ್.ಷಾ. ನೇತೃತ್ವದ ನ್ಯಾಯಪೀಠ ಬುಧವಾರ ಈ ವಿಚಾರ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

- Advertisement -

ಬಡವರ ಸಾಲ ಮರುಪಾವತಿ ಸಂಕಷ್ಟದ ಬಗ್ಗೆಯೂ ಗಮನ ಹರಿಸಿ, ಆರ್ ಬಿಐ ನೆರಳಲ್ಲಿ ನೀವು ಅವಿತುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಸಾಲ ಮರುಪಾವತಿ ವಿನಾಯಿತಿ ಮುಂದುವರಿಕೆಯಿಲ್ಲ : ಆರ್ ಬಿಐ ಸ್ಪಷ್ಟನೆ
ಸಾಲ ಕಂತು ಮರು ಪಾವತಿ ಎರಡು ವರ್ಷ ಮುಂದೂಡಬಹುದು ಎಂದು ಒಂದೆಡೆ ಸುಪ್ರೀಂ ಕೋರ್ಟ್ ಗೆ ಆರ್ ಬಿಐ ಮಾಹಿತಿ ನೀಡಿದ್ದರೆ, ಇನ್ನೊಂದೆಡೆ ಸಾಲದ ಮರುಪಾವತಿ ವಿನಾಯಿತಿ ಮುಂದುವರಿಯುವುದಿಲ್ಲ ಎಂದು ಆರ್ ಬಿಐ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸಾಲ ಪಾವತಿ ಮುಂದೂಡುವುದು ತಾತ್ಕಾಲಿಕ ಪರಿಹಾ, ಇದರಿಂದ ಬ್ಯಾಂಕ್ ಗಳಿಗೆ ಭಾರಿ ಸಮಸ್ಯೆಯಾಗಲಿದೆ ಎಂದಿದ್ದಾರೆ. ಆದ್ದರಿಂದ ಆರು ತಿಂಗಳಿನಿಂದ ಮುಂದೂಡಲ್ಪಟ್ಟಿದ್ದ ಸಾಲ ಮರುಪಾವತಿ ಸೆ.1ರಿಂದ ಮುಂದುವರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

- Advertisement -