ಬೆಂಗಳೂರು: ಸಿಸಿಬಿಯಿಂದ ರಾಕ್‌ಲೈನ್ ಖ್ಯಾತ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಗನ ವಿಚಾರಣೆ ನಡೆದಿದೆ. ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕಿಗೆ ವಂಚನೆ ಮಾಡಿದ ಆರೋಪ ರಾಕ್‌ಲೈನ್ ವೆಂಕಟೇಶ್ ಮಗನ ಮೇಲಿದೆ.
ವೆಂಕಟೇಶ್ ಅವರ ಮಗ ವೆಂಕಟೇಶ್ ಅಭಿಲಾಷ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ನಿಂದ ಸಾಲ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಇದೇ ಆರೋಪದಲ್ಲಿ ನಗರದ ಸಿಸಿಬಿ ಪೊಲೀಸ್ 5 ಜನರ ತಂಡವೊಂದನ್ನು ಬಂಧಿಸಿದೆ.ಆ ಐವರ ಪೈಕಿ ಅಭಿಲಾಷ್ ಒಬ್ಬರೆಂದು ಹೇಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಅಭಿಲಾಷ್ ರನ್ನು ಸಿಸಿಬಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.