ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಇರುವ ಕುರಿತು ಬಾಂಗ್ಲಾದೇಶೀಯರಿಗೆ ಕೋಪವಿಲ್ಲ ಎಂದ ಮಾಜಿ ಕ್ಯಾಬಿನೆಟ್ ಸಚಿವ ಅಬ್ದುಲ್ ಮೊಯೀನ್ ಖಾನ್, ಆದರೆ ಈ ಕುರಿತು ನೋವಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಹಸೀನಾ ಇರುವ ಕಾರಣ ಬಾಂಗ್ಲಾ-ಭಾರತದ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಭಾರತದ ನಿರ್ಧಾರದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ’ ಎಂದು ಹೇಳಿದರು.
ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು, ನಮ್ಮ ದೇಶವು ಭಾರತದೊಂದಿಗೆ ಮೂರು ಕಡೆ ಹಂಚಿಕೊಂಡಿದೆ ಮತ್ತು ಅದು ದೊಡ್ಡ ನೆರೆಯ ದೇಶವಾಗಿದೆ. ಆದ್ದರಿಂದ ಭಾರತವು ನಮ್ಮ ಉತ್ತಮ ಸ್ನೇಹಿತನಾಗದಿರಲು ಯಾವುದೇ ಕಾರಣವಿಲ್ಲ ಎಂದಿದ್ದಾರೆ.
ಪ್ರಸ್ತುತ ಬಾಂಗ್ಲಾ ಪರಿಸ್ಥಿತಿಯು ಸುಧಾರಿಸುತ್ತಿದೆ ಎಂದ ಅವರು, ಮಧ್ಯಂತರ ಸರ್ಕಾರವು ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.