ಢಾಕಾ: ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರ ಬಾಂಗ್ಲಾದೇಶದ ಸಮುದಾಯದ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ ಹಿಂದೂಗಳು ಶನಿವಾರ ಬೀದಿಗಿಳಿದಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ದೇಶದ ಎರಡನೇ ಅತಿದೊಡ್ಡ ನಗರವಾದ ಚಿತ್ತಗಾಂಗ್, ಬೃಹತ್ ರ್ಯಾಲಿಗಳು ನಡೆದಿದೆ.
ಇದೇ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮುಸ್ಲಿಂ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಪರವಾಗಿ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಚಿತ್ತಗಾಂಗ್‌ನಲ್ಲಿ ಐತಿಹಾಸಿಕ ಚೆರಗಿ ಪಹಾರ್ ಚೌಕದಲ್ಲಿ ಬೃಹತ್ ಸಮಾವೇಶ ನಡೆಯಿತು. ಕೆಲವು ವರದಿಗಳ ಪ್ರಕಾರ, ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವವರ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಮಂಡಳಿಗಳ ರಚನೆ, ಅಲ್ಪಸಂಖ್ಯಾತರಿಗೆ ಶೇ. 10ರಷ್ಟು ಸಂಸದೀಯ ಸ್ಥಾನಗಳ ಹಂಚಿಕೆ ಮತ್ತು ಇತರರೊಂದಿಗೆ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಜಾರಿಗೆ ಹಿಂದೂ ಪ್ರತಿಭಟನಾಕಾರರ ರ್ಯಾಲಿಯು ಒತ್ತಾಯಿಸಿದೆ. ಕೇಂದ್ರದ ಶಾಹಬಾಗ್‌ನಲ್ಲಿ 3 ಗಂಟೆಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಿತು.
ಬಾಂಗ್ಲಾದಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ನಡೆದ ಹಿಂಸಾಚಾರ ಕೋಮುಗಲಭೆಯಲ್ಲ, ಸಂತ್ರಸ್ತರಲ್ಲಿ ಮುಸ್ಲಿಮರೇ ಅಧಿಕವಾಗಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆಗೆ ಮುಸ್ಲಿಮರು ನಿಂತಹ ಘಟನೆಗಳೂ ನಡೆದಿವೆ. ಆದರೂ ಹಿಂದೂಗಳ ವಿರುದ್ಧದ ದಾಳಿಯೆಂಬಂತೆ ಚಿತ್ರಿಸುವ, ಭಾವಿಸುವ ಬೆಳವಣಿಗೆ ದುರುದ್ದೇಶಪೂರ್ವಕ ಎಂದು ಹೇಳಲಾಗುತ್ತಿವೆ.