ಬಾಂಗ್ಲಾದೇಶ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ: ಅಮೆರಿಕ

Prasthutha|

ವಾಷಿಂಗ್ಟನ್: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷವು ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ್ದು, ಅಮೆರಿಕ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಚುನಾವಣೆ ಮುಕ್ತ ಅಥವಾ ನ್ಯಾಯಸಮ್ಮತವಾಗಿರಲಿಲ್ಲ, ಎಲ್ಲಾ ಪಕ್ಷಗಳು ಮತದಾನದಲ್ಲಿ ಭಾಗವಹಿಸಿಲ್ಲ ಎಂದು ಅಮೆರಿಕಾ ಹೇಳಿದೆ.

- Advertisement -

ಬಾಂಗ್ಲಾದೇಶದಲ್ಲಿ ಚುನಾವಣಾ ದಿನದಂದು ಸಾವಿರಾರು ವಿರೋಧ ಪಕ್ಷಗಳ ಸದಸ್ಯರನ್ನು ಬಂಧಿಸಲಾಗಿದ್ದು, ಚುನಾವಣೆಯಲ್ಲಿ ಅಕ್ರಮಗಳ ಬಗ್ಗೆ ವರದಿಯಾಗಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಚುನಾವಣೆಗಳು ಮುಕ್ತ ಅಥವಾ ನ್ಯಾಯಯುತವಾಗಿಲ್ಲ ಎಂಬ ಅಭಿಪ್ರಾಯವನ್ನು ಯುನೈಟೆಡ್ ಸ್ಟೇಟ್ಸ್ ಇತರ ವೀಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ಎಲ್ಲಾ ಪಕ್ಷಗಳು ಭಾಗವಹಿಸಲಿಲ್ಲ ಎಂದು ವಿಷಾದಿಸುತ್ತೇವೆ ಎಂದೂ ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.

- Advertisement -

ಜನವರಿ 7 ರ ಸಂಸತ್ತಿನ ಚುನಾವಣೆಯಲ್ಲಿ ಹಸೀನಾ ಅವರ ಅವಾಮಿ ಲೀಗ್ ಬಹುಪಾಲು ಸ್ಥಾನಗಳನ್ನು ಗೆದ್ದಿರುವುದನ್ನು ಗಮನಿಸಿದರೆ, ಚುನಾವಣೆಯ ದಿನ ಮತ್ತು ಅದಕ್ಕೂ ಮುಂಚಿನ ತಿಂಗಳುಗಳಲ್ಲಿ ನಡೆದ ಹಿಂಸಾಚಾರವನ್ನು ಅಮೆರಿಕ ಖಂಡಿಸುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.



Join Whatsapp