ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಬೆಂಗಳೂರಿನ ಕೆ.ಪಿ.ಅಶ್ವಿನಿ ನೇಮಕ

Prasthutha|

ಬೆಂಗಳೂರು: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ವರ್ಣಭೇದ ಮತ್ತು ಸಂಬಂಧಿತ ಅಸಹಿಷ್ಣುತೆ ಕುರಿತಂತೆ ಸ್ವತಂತ್ರ ತಜ್ಞರನ್ನಾಗಿ ಕನ್ನಡತಿ ಕೆ.ಪಿ. ಅಶ್ವಿನಿ ಅವರನ್ನು ನೇಮಕ ಮಾಡಿದೆ. ಈ ಹುದ್ದೆಗೆ ನೇಮಕಗೊಂಡ ಪ್ರಥಮ ಏಷ್ಯನ್ ಹಾಗೂ ಭಾರತೀಯರೆಂಬ ಹೆಗ್ಗಳಿಕೆಗೆ ಕೆ.ಪಿ. ಅಶ್ವಿನಿ ಪಾತ್ರರಾಗಿದ್ದಾರೆ.

- Advertisement -

ಜಿನೀವಾ ಮೂಲದ 47 ಮಂದಿ ಸದಸ್ಯರನ್ನೊಳಗೊಂಡ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ, ಪರಿಶಿಷ್ಟ ಸಮುದಾಯಪರ ಹೋರಾಟ ಮತ್ತು ರಾಜಕೀಯ ವಿಜ್ಞಾನ ಮಂಡಳಿ ಪ್ರೊ. ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದೆ.

ಪ್ರಸ್ತುತ ಅವರು ವರ್ಣಭೇದ, ಕ್ವೆನೋಫೋಬಿಯಾ ಮತ್ತು ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳ ಆಧಾರಿತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಝಾಂಭಿಯಾದ ಇ. ತೆಂದಾಯಿ ಅಚುಮೆ ರಾಜೀನಾಮೆಯಿಂದ ತೆರೆವಾದ ಸ್ವತಂತ್ರ ತಜ್ಞರ ಸ್ಥಾನಕ್ಕೆ ಕೆ.ಪಿ. ಅಶ್ವಿನಿ ನಿಯೋಜನಗೊಂಡಿದ್ದಾರೆ.

Join Whatsapp