ಈದ್ ಮಿಲಾದ್:  ಬೆಂಗಳೂರಿನ ಈ ರಸ್ತೆಗಳಲ್ಲಿ ಗುರುವಾರ ಸಂಚಾರ ನಿರ್ಬಂಧ

Prasthutha|

ಮಾರ್ಗ ಬದಲಾವಣೆಯ ಸಂಪೂರ್ಣ ವಿವರ ಇಲ್ಲಿದೆ

- Advertisement -

ಬೆಂಗಳೂರು: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ಬೆಂಗಳೂರಿನ ಕೆಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ಕುರಿತು ಬೆಂಗಳೂರು ನಗರ ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ನೃಪತುಂಗ, ಅಂಬೇಡ್ಕರ್ ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕಿಂಕೋ ಜಂಕ್ಷನ್, ಬಾಪೂಜಿನಗರ, ಮಾರ್ಕೆಟ್ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಬದಲಿ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಪೊಲೀಸರು ಸೂಚಿಸಿದ್ದಾರೆ.

- Advertisement -

ನಗರದ ನಾಗವಾರ ಜಂಕ್ಷನ್, ನೇತಾಜಿ ಜಂಕ್ಷನ್, ಲಾಜರ್ ರಸ್ತೆ, MM ರಸ್ತೆ ಜಂಕ್ಷನ್, HM ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಾಳೆ‌ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಹಿನ್ನೆಲೆ ದರ್ಗಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿಯೂ ಬೆಂಗಳೂರು ಸಂಚಾರ ಪೊಲೀಸರು ವಿವರ ಒದಗಿಸಿದ್ದಾರೆ.

ನೃಪತುಂಗ ರಸ್ತೆಗೆ ಬದಲಿ

ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನ ಸವಾರರು ಕೆ.ಆರ್ ಸರ್ಕಲ್ ಬಳಿ ಎಡ ತಿರುವು ಪಡೆದು ಡಾ|| ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಬಾಳೇಕುಂದ್ರಿ ಸರ್ಕಲ್ ಕ್ಲೀನ್ಸ್ ರಸ್ತೆ ಮೂಲಕ ಮುಂದಕ್ಕೆ ತೆರಳುವುದು.

ಡಾ.ಎ.ಆರ್. ಅಂಬೇಡ್ಕರ್ ರಸ್ತೆ

ಬಾಳೇಕುಂದ್ರಿ ಸರ್ಕಲ್‌ನಿಂದ ಸಿಟಿ ಮಾರ್ಕೆಟ್ ಕಡೆಗೆ ಸಂಚರಿಸುವ ಸವಾರರು ಕ್ಲೀನ್ಸ್ ರಸ್ತೆ ಸಿದ್ದಅಂಗಯ್ಯ ಸರ್ಕಲ್ ಮೂಲಕ ಸಂಚರಿಸುವುದು.

ನಾಯಂಡನಹಳ್ಳಿ ಜಂಕ್ಷನ್

ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲ ನಾಯಂಡನಹಳ್ಳಿ ಅಂಗ್ಲಸ್ ನಲ್ಲಿ ಎಡ ತಿರುವು ಪಡೆದು ನಾಗರಬಾವಿ ರಿಂಗ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಹಾಗೂ ಚಂದ್ರಲೇಔಟ್ ವಿಜಯನಗರ ಮುಖೇನ ಸಂಚರಿಸಬಹುದಾಗಿರುತ್ತದೆ.

ಕಿಂಕೋ ಜಂಕ್ಷನ್

ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣಿ ಹೆಚ್ಚಾದಲ್ಲಿ ಕಿಂಕೋ ಜಂಕ್ಷನ್‌ನಲ್ಲ ಎಡತಿರುವು ಪಡೆದು ವಿಜಯನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ

ಬಾಪೂಜಿ ನಗರ

ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣಿ ಹಚ್ಚಾದಲ್ಲ ವಿಜಯನಗರದ ಕಡೆಯಿಂದ ಬರುವ ವಾಹನಗಳು ಮೈಸೂರು ಕಡೆಗೆ ಟೆಲಸಲು ಚಂದ್ರಲೇಔಟ್‌ನಿಂದ ಬಲ ತಿರುವು ಪಡೆದು ನಾಗರಬಾವಿ ಸರ್ಕಲ್ ಹಾಗೂ ರಿಂಗ್ ರಸ್ತೆ ಮುಖಾಂತರ ಕೆಂಗೇರಿ ಉಪ ನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ

ಮಾರ್ಕೆಟ್ ಸರ್ಕಲ್

ಟೌನ್‌ ಹಾಲ್‌ ಕಡೆಗೆ ಸಂಚಾರ ದಟ್ಟಣೆ ಉಂಟಾದಲ್ಲಿ ಬಸಪ್ಪ ಸರ್ಕಲ್ ಕಡೆಗೆ ಬಲತಿರುವು ನೀಡಿ ಅಥವಾ ಅವಿನ್ಯೂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗುವುದು.

ಟ್ರಾಫಿಕ್ ಪೊಲೀಸರು ಮಾಡಿರುವ ಟ್ವೀಟ್

ಪರ್ಯಾಯ ಮಾರ್ಗಗಳು

ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡಗ ಬರುವ ವಾಹನಗಳು ನಾಗವಾರ ಅಂಗ್ಟನ್‌ನಿಂದ ಎಡತಿರುವು – ಹೆಣ್ಣೂರು ಜಂಕ್ಷನ್ – ಬಲತಿರುವು – ಸಿದ್ಧಪ್ಪ ರೆಡ್ಡಿ ಜಂಕ್ಷನ್ – ಅಯೋಧ್ಯ ಜಂಗ್ಟನ್-ಅಂಗರಾಜಪುರಂ ಹೈ ಓವರ್ ಮೂಲಕ ರಾಬರ್ಟ್‌ಸನ್ ರಸ್ತೆ ಜಂಕ್ಷನ್‌ನಲ್ಲ ಬಲ ತಿರುವು – ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು.

ಶಿವಾಜನಗರದ ಕಡೆಯಿಂದ ನಾಗವಾರ ಅಂಕ್ಷನ್‌ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪರದು – ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಡ್ ರಸ್ತೆ ತಲುಪಿ ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದಾಗಿದೆ.

ಆರ್.ಅ.ನಗರ ದಿಂದ ಮತ್ತು ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಮುಷ್ಟಾಂಟಂ ಟಾಕೀಸ್ ಬಳಿ ಎಡ ತಿರುವು ವರದು ವೀರಣ್ಣ ಪಾಳ್ಯ ಅಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಅಂಗ್ಟನ್ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ.

ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್‌ನಿಂದ – ಬಲತಿರುವು ಮಾಸ್ಕ್ ಜಂಕ್ಷನ್ ಲಾಟರ್ ರಸ್ತೆ ಎಂ.ಎಂ.ರಸ್ತೆ ಜಂಕ್ಷನ್ – ಎಡತಿರುವು – ನಾಟರಿ – – ರಸ್ತೆ ಹೆಣ್ಣೂರು ರಸ್ತೆ ಜಂಕ್ಷನ್ – ಬಲತಿರುವು – ಹಣ್.ಎಂ.ರಸ್ತೆ ಡೇವಿಸ್ ರಸ್ತೆ ಜಂಕ್ಷನ್‌ ಮೂಲಕ ಅಂಗರಾಜಮರಂ ಕೃಓವರ್ ಮುಖೇನ ಹಣ್ಣೂರು ಕಡೆಗೆ ಸಂಚರಿಸಬಹುದಾಗಿದೆ.

ಲಾಜರ್ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಲ್ಲಿ ಮಾಸ್ಕ್ ಸರ್ಕಲ್ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಲಾಜರ್‌ ರಸ್ತೆಯಲ್ಲಿ ಮುಂದುವರೆದು ಸಿಂಧಿ ಕಾಲೋನಿ ಜಂಕ್ಷನ್ –ವೀಲರ್ ರಸ್ತೆ ಮೂಲಕ ಕೀರ್ತಿ ಸಾಗರ್ ಥಾಮಸ್ ಬೇಕರಿ – ಥಾಮಸ್ ಕಥೆ ಜಂಕ್ಷನ್ – ಬಲತಿರುವು – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹನ್ಸ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.

ಹೆಚ್.ಎಂ.ರಸ್ತೆ ಮೂಲಕ ವಾಟರಿ ರಸ್ತೆ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಹೆಚ್‌.ಎಂ.ರಸ್ತೆಯಲ್ಲಿ ‘ಕಡ್ಡಾಯವಾಗಿ ಎಡ ತಿರುವು ಪಡೆದು ಲಾಜರ್ ರಸ್ತೆ – ಸಿಂಧಿ ಕಾಲೋನಿ ಜಂಕ್ಷನ್ – ವೀಲರ್ ರಸ್ತೆ ಮೂಲಕ ಕೀರ್ತಿ – ಸಾಗರ್ – ಥಾಮಸ್ ಬೇಕರಿ – ಥಾಮಸ್ ಕಫ ಅಂಗ್ಟನ್ – ಬಲತಿರುವು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹನ್ನ = ಸರ್ಕಲ್‌ ಕಡೆಗೆ ಸಂಚರಿಸಬಹುದಾಗಿದೆ

ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು

ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಮರ ಜಂಕ್ಷನ್‌ನಿಂದ ಗೋವಿಂದಮಠ ಕಾ & ಸು ಮೊಅಸ್ ಠಾಣೆಯವರೆಗೆ ಮತ್ತು ಹೆಚ್.ಐ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ, ಟೆಂಟ್ ಜಂಕ್ಷನ್‌ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿರುತ್ತದೆ.

ನೇತಾಜಿ ಜಂಕ್ಷನ್‌ನಿಂದ ಹನ್ಸ್ ಸರ್ಕಲ್‌ವರೆಗೆ, ಹನ್ಸ್ ಸರ್ಕಲ್ ನಿಂದ ನ್ಯೂ ಬಂಬೂ ಬಹಾರ್ ಸರ್ಕಲ್‌ವರೆಗ, ಹನ್ಸ್ ಸರ್ಕಲ್‌ನಿಂದ ಹಜ್‌ ಕ್ಯಾಂಪ್‌ವರೆಗೆ ಮತ್ತು ಲಾಜರ್ ರಸ್ತೆಯಿಂದ ವೀಲರ್ ರಸ್ತೆಯ ಥಾಮಸ್ ಕಫೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿರುತ್ತದೆ.

Join Whatsapp