ಐದು ಭಾಗಗಳಾಗಿ ಮರು ವಿಂಗಡನೆಯಾಗಲಿರುವ ಬೆಂಗಳೂರು

Prasthutha|

ಬೆಂಗಳೂರು: ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯನ್ನು ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹೊರವಲಯದ ಹಲವು ಭಾಗಗಳಿಗೆ ವಿಸ್ತರಿಸಿ, ಐದು ಪಾಲಿಕೆಗಳನ್ನಾಗಿ ವಿಭಾಗಿಸುವ ಚಿಂತನೆ ರಾಜ್ಯ ಸರ್ಕಾರದಲ್ಲಿ ನಡೆದಿದೆ.

- Advertisement -

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಎಂದು ಬೆಂಗಳೂರು ಪಾಲಿಕೆಯನ್ನು ಐದು ಭಾಗ ಮಾಡಿ, ತಲಾ 80 ವಾರ್ಡ್‌ಗಳಾಗಿ ಮರು ವಿಂಗಡಿಸುವ ಕುರಿತು ಬೆಂಗಳೂರು ಕಾಂಗ್ರೆಸ್ ಶಾಸಕರ ನಿಯೋಗದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ಹೊರವಲಯ ಸಾಕಷ್ಟು ಬೆಳೆದಿದೆ. ಹೆಚ್ಚು ಆದಾಯವಿರುವ ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ ಭಾಗದ ಪ್ರದೇಶಗಳು ಬಿಬಿಎಂಪಿಯಿಂದ ಹೊರಗಿವೆ. ಈ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತಂದರೆ ಹೆಚ್ಚಿನ ತೆರಿಗೆ ಸಂಗ್ರಹಕ್ಕೂ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ, ಐದು ವಿಭಾಗಗಳಾಗಿ ವಿಂಗಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕ್ಷೇತ್ರ ಮರು ವಿಂಗಡಣಾ ಸಮಿತಿ ಸಲಹೆ ನೀಡಿದೆ. ಈ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆದಿದೆ.ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಬಗ್ಗೆಯೂ ಚರ್ಚೆ ನಡೆಯಿತು ಎಂದೂ ತಿಳಿದು ಬಂದಿದೆ.

Join Whatsapp