ಬೆಂಗಳೂರು: ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಬಲವಂತಪಡಿಸಿದ MCC ಕಾಲೇಜು

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಾಗುತ್ತಿರುವ ಮಧ್ಯೆ ಬೆಂಗಳೂರಿನ MCC ಕಾಲೇಜಿನಲ್ಲಿ 17 ವರ್ಷದ ಅಮೃತಧಾರಿ ಸಿಖ್ ವಿದ್ಯಾರ್ಥಿನಿಗೆ ಟರ್ಬಲ್ ತೆಗೆಯುವಂತೆ ಬಲವಂತಪಡಿಸಿದ ಘಟನೆ ಇದೀಗ ವಿವಾದ ಸೃಷ್ಟಿಯಾಗಿದೆ.

- Advertisement -

MCC ಕಾಲೇಜಿನ ಸಿಖ್ ವಿದಾರ್ಥಿನಿಯ ಪೇಟಾ ತೆಗೆಯುವಂತೆ ಸೂಚಿಸಿದ್ದು, ಈ ಕಾಲೇಜಿನಲ್ಲಿ ಸಮಾನ ವಸ್ತ್ರಸಂಹಿತೆ ಜಾರಿಯಲ್ಲಿದ್ದು, ಪೇಟಾ ತೆಗೆದುಕೊಂಡು ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪಾಲಿಸಬೇಕು ಎಂದು ವಿದ್ಯಾರ್ಥಿನಿಗೆ ಹೇಳಿದೆ. ಇದಕ್ಕೆ ಸಿಖ್ ವಿದ್ಯಾರ್ಥಿನಿ ಆಕ್ಷೇಪ ವ್ಯಕ್ತಪಡಿಸಿದ್ದಾಳೆ.

ಈ ಮಧ್ಯೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ವಿದ್ಯಾರ್ಥಿನಿಗೆ ಫೆಬ್ರವರಿ 16 ರಂದು ಪೇಟಾ ತೆಗೆಯುವಂತೆ ಸೂಚಿಸಿದ್ದರೂ ಆಕೆ ನಿರಾಕರಿಸಿದ್ದಳು. ಕಾಲೇಜು ಆಡಳಿತ ಮಂಡಳಿ ಆಕೆಯ ತಂದೆಯೊಂದಿಗೆ ಮಾತನಾಡಿದಾಗ ಸಿಖ್ ಗೆ ಟರ್ಬನ್ ನ ಪ್ರಾಮುಖ್ಯತೆಯನ್ನು ಅರ್ಥೈಸಿದ್ದರು. ಇದೀಗ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಟರ್ಬನ್ ತೆಗೆಯಲು ಸೂಚಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈ ಕುರಿತು ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಟರ್ಬಲ್ ತೆಗೆಯಲು ಸೂಚಿಸಲಾಗಿದೆ. ಆದರೆ ಈ ಆದೇಶ ಟರ್ಬಲ್’ಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.



Join Whatsapp