ಬೆಂಗಳೂರು: ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಜಿತೇಂದ್ರ ಸಿಂಗ್ ಬಂಧನ!

Prasthutha|

ಬೆಂಗಳೂರು: ಪಾಕಿಸ್ತಾನದ ಗೂಢಾಚಾರಿಯೊಬ್ಬನನ್ನು ಬೆಂಗಳೂರಿನ ಕಾಟನ್ ಪೇಟೆಯ ಮೊಹಲ್ಲಾದಲ್ಲಿ ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಜಿತೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ರಾಜಸ್ಥಾನದ ಬಾರ್ಮರ್ ನಿವಾಸಿ. ಕಾಟನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಸೇನಾಧಿರಿಸು ಧರಿಸಿ ವಂಚನೆಗೆ ಇಳಿದಿದ್ದು, ಇಂದು ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದಿದ್ದಾನೆ.

- Advertisement -


ಜಿತೇಂದ್ರ ಸಿಂಗ್ ಪಾಕಿಸ್ತಾನದ ISI ಜೊತೆ ಸಂಪರ್ಕ ಹೊಂದಿದ್ದು, ಭಾರತೀಯ ಸೇನೆಯ ಬಗ್ಗೆ ವಾಟ್ಸಪ್ ಮೂಲಕ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

- Advertisement -