77ನೇ ಸ್ವಾತಂತ್ರ್ಯೋತ್ಸವ: ಬೆಂಗಳೂರು ಬ್ಯಾರಿಸ್ ಫೋರಮ್ ವತಿಯಿಂದ ರಕ್ತ ದಾನ ಶಿಬಿರ

Prasthutha|

ಬೆಂಗಳೂರು: 77ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರು ಬ್ಯಾರಿಸ್ ಫೋರಮ್ ಸಂಘವು ನಗರದ ವಿವಿಧ ಭಾಗಗಳಲ್ಲಿ ರಕ್ತ ದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಇದರ ಪ್ರಥಮ ಶಿಬಿರ ಉದ್ಘಾಟನೆಯನ್ನು  ನಾರಾಯಣ ಹೃದಯಾಲಯದ ಸಹಭಾಗಿತ್ವದಲ್ಲಿ ಬೆಂಗಳೂರಿನ HAL ನ ಕೆಎಂಪಿ ಚರ್ಚ್ ಸ್ಕೂಲ್ ನಲ್ಲಿ ಯಶಶ್ವಿಯಾಗಿ ನಡೆಸಲಾಯಿತು.

- Advertisement -

ಕಾರ್ಯಕ್ರಮಕ್ಕೆ ಮುಖ್ಯ ಅತಿಯಾಗಿ ಶ್ರೀ ಡಿಕೆ ಮೋಹನ್ ಬಾಬು ಕೆಪಿಸಿಸಿ ಜನರ್ ಸೆಕ್ರೆಟರಿರವರು ಉದ್ಘಾಟನೆ ಮಾಡಿ, ನಾರಾಯಣ ಹೃದಯಲಯದ ರಕ್ತ ನಿಧಿಗೆ ರಕ್ತ ಹಸ್ತಾಂತರ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ L ಜಯರಾಮ್ ರವರು ex ನಗರ ಸಭೆ ಅಧ್ಯಕ್ಷರು ಭಾಗವಹಿಸಿ ಹಿತವಚನ ನೀಡಿದರು.

- Advertisement -

ಹಾಗೂ ಮುಖಂಡರುಗಳಾದ ಶ್ರೀ ಇಫ್ತಾಯರ್, ಶ್ರೀ ವಿನೋದು, ಶ್ರೀಮತಿ ಮಹಾಲಕ್ಷ್ಮಿ, ಶ್ರೀಮತಿ ಬೇಗಂ ಉಪನ್ಯಾಸಕಿ ಯವರು ಭಾಗವಹಿಸಿ ಶಿಬಿರದ ಘನತೆ ಹೆಚ್ಚಿಸಿದರು.

ಕೇವಲ 4 ದಿನದ ಉದ್ಘಾಟನ ಪ್ರಚಾರ ಮಾಡಿ ನೂರಾರು ಯೂನಿಟ್ ರಕ್ತವನ್ನು ದಾನಿಗಳಿಂದ ಪಡೆದು ನಾರಾಯಣ ಹೃದಯಾಲಯ ಆಸ್ಪತ್ರೆಗೆ ಯ ಪ್ರಸಂಸೆಗೆ ಪಾತ್ರವಾಯಿತು.

ನಿರೀಕ್ಷೆಗಿಂತ ಹೆಚ್ಚು ದಾನಿಗಳು ಬಂದು ಭಾಗವಹಿಸಿ ಅದರಲ್ಲಿ ಮೊದಲ ಬಾರಿ ರಕ್ತ ದಾನ ಮಾಡಿದ ಯುವಕರು ರಕ್ತದಾನ ಮಾಡಿ ಖುಷಿ ಪಟ್ಟರು. ವಿಶೇಷವಾಗಿ ಮಹಿಳೆಯರು ಮತ್ತು 60 ವಯಸ್ಸಿನ ಹಿರಿಯ ರಕ್ತದಾನಿಗಳು ರಕ್ತ ದಾನ ಮಾಡಿ ಯುವಕರಿಗೆ ಪ್ರೇರಣೆಯಾದರು.

ಬೆಂಗಳೂರು ಬ್ಯಾರಿಸ್ ಫಾರಂ ಸಂಸ್ಥೆಯ ಮೊದಲ ಕಾರ್ಯಕ್ರಮ ಇದಾಗಿದ್ದು, ಸಾವಿರಾರು ಜನ ಬಂದು ಭಾಗವಹಿಸಿ ಶುಭ ಹಾರೈಸಿದರು

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್ ಅನುಗ್ರಹ ರವರು ಮಾತನಾಡಿ ಬೆಂಗಳೂರುನಲ್ಲಿ ಇದೆ ತಿಂಗಳು ವಿವಿಧ ಕಡೆ ರಕ್ತ ದಾನ ಶಿಬಿರ ಏರ್ಪಡಿಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ರಕ್ತದ ಸಮಸ್ಯೆ ಯನ್ನು ಹೋಗಲಾಡಿಸುವ ಭರವಸೆ ಕೊಟ್ಟರು.

ಗೌರವ ಅಧ್ಯಕ್ಷರು ಶ್ರೀ ಇಸ್ಮಾಯಿಲ್ ದುಬೈ, ಸದಸ್ಯರರುಗಳಾದ ಶ್ರೀ ಗಫ್ಫರ್ ಶ್ರೀ ಮುಸ್ತಫ, ಶ್ರೀ ಅಬ್ಬಾಸ್ CP, ಶ್ರೀ ಜಮೀರ್, ಶ್ರೀ ಹನೀಫ್, ಶ್ರೀ ರಫೀಕ್,ಶ್ರೀ ಹ್ಯಾರೀಶ್, ಶ್ರೀ ಹಝೀಜ್,ಶ್ರೀ ರಿಫಾಜ್ ರವರು

ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದರು.



Join Whatsapp