ಬೆಂಗಳೂರು ಬಂದ್: ಅಂದಾಜು 200 ರೂ. ಕೋಟಿ ನಷ್ಟ; ಎಫ್‌ ಕೆಸಿಸಿಐ

Prasthutha|

- Advertisement -

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ನಡೆದ ಬೆಂಗಳೂರು ಬಂದ್​ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಬಂದ್​​ ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಸಂಭವಿಸಿದೆ.

ವಾಣಿಜ್ಯ ಒಕ್ಕೂಟ ಎಫ್​ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲ್ ರೆಡ್ಡಿ ಅವರು ಬೆಂಗಳೂರು ಬಂದ್​ನಿಂದ ಉಂಟಾಗಿರುವ ನಷ್ಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಬೆಂಗಳೂರಿನಲ್ಲಿನ ಆದಾಯದ ಪಾಲು ಶೇ.60ರಷ್ಟಿದೆ. ಬಂದ್​ನಿಂದ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದರಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

- Advertisement -

ಬೆಂಗಳೂರು ಬಂದ್​ ನಿಂದ ಜಿಎಸ್​ ಟಿ ಸಂಗ್ರಹ ವ್ಯತ್ಯಯವಾಗಿದ್ದು, 10 ತಾಸಿನ ಬೆಂಗಳೂರು ಬಂದ್​ ನಿಂದ ಅಂದಾಜು ಸುಮಾರು 200-250 ಕೋಟಿ ರೂ‌. ನಷ್ಟ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.