ಕಾಬೂಲ್ : ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾಗಿ ತಾಲಿಬಾನ್ ಘೋಷಿಸಿದೆ. ಅಫ್ಘಾನಿ ನ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯ ನಿಟ್ಟಿನಲ್ಲಿ ಈ ದೇಶದ ಜನರು ತಮ್ಮ ನಿತ್ಯದ ಪ್ರತಿ ವ್ಯವಹಾರದಲ್ಲಿಯೂ ಅಫ್ಗಾನ್‌ನ ಕರೆನ್ಸಿಯನ್ನೇ ಬಳಸಬೇಕು ಎನ್ನುವ ನಿರ್ಣಯವನ್ನು ಜಾರಿ ಮಾಡಿದ್ದು, ಸಂಪೂರ್ಣವಾಗಿ ವಿದೇಶಿ ಕರೆನ್ಸಿಯ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
“ಇನ್ನು ಮುಂದೆ ಯಾರಾದರೂ ವಿದೇಶಿ ಕರೆನ್ಸಿಯನ್ನು ದೇಶೀಯ ವ್ಯವಹಾರಕ್ಕೆ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ.”ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ನಿಟ್ಟಿನಲ್ಲಿ ಅಫ್ಘಾನರು ಪ್ರತಿ ವಹಿವಾಟಿನಲ್ಲಿ ಅಫ್ಘಾನ್ ಕರೆನ್ಸಿಯನ್ನು ಬಳಸಬೇಕು” ಎಂದು ಹೇಳಿದ್ದಾರೆ