ರಸ್ತೆ ಕುಸಿಯುವ ಭೀತಿ| ಆಗುಂಬೆ ಘಾಟಿಯಲ್ಲಿ ಘನ ವಾಹನಗಳಿಗೆ ನಿಷೇಧ: ಪರ್ಯಾಯ ಮಾರ್ಗ ಹೀಗಿದೆ

Prasthutha|

ಉಡುಪಿ: ಆಗುಂಬೆ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದಾಗಿ ಸೆಪ್ಟೆಂಬರ್‌ 15 ರ ವರೆಗೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

- Advertisement -

ಭಾರೀ ಮಳೆ ಮತ್ತು ಭಾರೀ ವಾಹನ ಸಂಚಾರದಿಂದ ರಾಷ್ಟ್ರೀಯ ಹೆದ್ಧಾರಿ 169 A ಯ ಆಗುಂಬೆ ಘಾಟಿಯ 6,7 ಮತ್ತು 11 ನೇ ತಿರುವಿನಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ರಸ್ತೆ ಕುಸಿಯುವ ಆತಂಕ ಉಂಟಾಗಿದೆ. ಹೀಗಾಗಿ ಜುಲೈ 27 ರಿಂದ ಸೆಪ್ಟೆಂಬರ್‌ 15 ರ ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ತೀರ್ಥಹಳ್ಳಿ – ಉಡುಪಿ ಮಧ್ಯೆ ಸಂಚರಿಸುವ ಭಾರೀ ವಾಹನಗಳು ಈ ಕೆಳಗಿನ ಬದಲಿ ಮಾರ್ಗವನ್ನು ಆಯ್ದುಕೊಳ್ಳಬಹುದು ಎಂದು ಪ್ರಕಟನೆ ಹೊರಡಿಸಿದ್ದಾರೆ.

- Advertisement -

ಮಾರ್ಗ 1. ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಘಾಟ್‌- ಕಾರ್ಕಳ- ಉಡುಪಿ

ಮಾರ್ಗ 2. ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ

Join Whatsapp