ಗೋಬಿ ಮಂಚೂರಿ, ಕಬಾಬ್ ಸೇರಿ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣಕ್ಕೆ ನಿಷೇಧ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಬಣ್ಣ ಬಳಸಿ ಮಾಡಿದ ಕಾಟನ್ ಕ್ಯಾಂಡಿಗಳನ್ನು ನಿಷೇಧಿಸಲಾಗುವುದು. ಕಾಟನ್ ಕ್ಯಾಂಡಿಗೆ ದಟ್ಟ ಮತ್ತು ಆಕರ್ಷಕ ಬಣ್ಣ ಬರಲು ರೋಡಮೈನ್–ಬಿಯನ್ನು ಬಳಸಲಾಗುತ್ತದೆ. ಇದನ್ನು ಆಹಾರದಲ್ಲಿ ಬಳಸುವುದಕ್ಕೆ ನಿಷೇಧವಿದೆ. ಇದು ಕ್ಯಾನ್ಸರ್ ಗೆ ಕಾರಣವಾಗುವ ಅಂಶವನ್ನು ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

- Advertisement -


ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಗೋಬಿ ಮಂಚೂರಿ, ಪಾನಿಪುರಿ, ಕಬಾಬ್ ಸೇರಿ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗುವುದು. ಬೀದಿ ಬದಿಯ ತಳ್ಳು ಗಾಡಿ ವ್ಯಾಪಾರಿಗಳಿಂದ ಹಿಡಿದು ಪಂಚ ತಾರಾ ಹೋಟೇಲ್ ವರೆಗೂ ಆದೇಶ ಅನ್ವಯವಾಗುತ್ತದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಆಹಾರ ಪದಾರ್ಥಗಳನ್ನು ತಯಾರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ದಂಡ ಮತ್ತು ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ’ ಎಂದು ದಿನೇಶ್ ಹೇಳಿದರು.


‘ಗೋಬಿ ಮಂಚೂರಿ ಸೇರಿ ಯಾವುದೇ ಆಹಾರಗಳ ಮೇಲೆ ನಿಷೇಧ ವಿಧಿಸುವುದಿಲ್ಲ. ಆದರೆ ಇವುಗಳಿಗೆ ಬಳಸುವ ಕೃತಕ ಬಣ್ಣ ಮತ್ತು ರುಚಿಯನ್ನು ವರ್ಧಿಸಲು ಬಳಸುವ ರಾಸಾಯನಿಕಗಳನ್ನು ಬಳಸುವುದನ್ನು ನಿರ್ಬಂಧಿಸಲಾಗುವುದು. ಇವೆಲ್ಲ ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸಾರ್ವಜನಿಕರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.



Join Whatsapp