ಗಂಟಲಲ್ಲಿ ಬಲೂನ್​ ಸಿಲುಕಿ 3 ವರ್ಷದ ಮಗು ಮೃತ್ಯು

Prasthutha|

- Advertisement -

ಮುಂಬೈ: ಗಂಟಲಲ್ಲಿ ಬಲೂನ್ ಸಿಲುಕಿಕೊಂಡು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ.

ಮಗು ಸಂಜೆಯ ಸಮಯದಲ್ಲಿ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದು, ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟಿತ್ತು, ಹಾಗಾಗಿ ಮನೆಯಲ್ಲಿದ್ದವರೆಲ್ಲಾ ಭಯಗೊಂಡರು, ಏನಾಗುತ್ತಿದೆ ಎಂದು ಕೇಳಿದ್ದಾರೆ. ಆಟವಾಡುತ್ತಾ ಬಲೂನ್ ನುಂಗಿರುವ ವಿಚಾರವನ್ನು ಸ್ನೇಹಿತರು ತಿಳಿಸಿದ್ದಾರೆ.

- Advertisement -

ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

Join Whatsapp