ಬಕ್ರೀದ್ ಬರ್ತಾ ಇದೆ ಆ ದಳ ಈ ದಳ ಎಂದು ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗಾಕಿ: ಸಚಿವ ಪ್ರಿಯಾಂಕ ಖರ್ಗೆ ಖಡಕ್ ಸೂಚನೆ

Prasthutha|

ಕಲ್ಬುರ್ಗಿ: ಬಕ್ರೀದ್ ಬರ್ತಾ ಇದೆ ಯಾರೋ ಶಾಲು ಹಾಕಿಕೊಂಡು ಆ ದಳ ಈ ದಳ ಅಂದುಕೊಂಡು ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗಾಕಿ ಎಂದು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ತಮ್ಮ ಕೆಲಸವನ್ನು ಸಂಘಪರಿವಾರದವರಿಗೆ ಕೊಟ್ಟು ನೀವು ಠಾಣೆಯಲ್ಲಿ ಇರುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರ ಇರುವಾಗ ಕೆಲವರು ರೈತರ ಮನೆಗಳಿಗೆ ನುಗ್ಗಿ ಗೋವುಗಳನ್ನು ತಂದಿದ್ದಾರೆ ಎಂದರು.


ಎಲ್ಲರೂ ಕಾನೂನು ಪ್ರಕಾರ ನಡೆಯಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಜರುಗಿಸಿ ಎಂದಿದ್ದಾರೆ.