ಬೆಂಗಳೂರು: ಜಾನುವಾರು ವಧೆ ತಡೆ ಮತ್ತು ಸಂರಕ್ಷಣೆ ಕಾಯ್ದೆ, 2020ರ ಅನುಸಾರ ಕರ್ನಾಟಕದಲ್ಲಿ ಜಾನುವಾರುಗಳ ಮಾರಾಟ, ಸಾಗಾಣಿಕೆ ಮತ್ತು ವಧೆಗೆ ನಿಷೇಧ ಹೇರಿರುವುದರಿಂದ ಈ ವರ್ಷದ ಬಕ್ರೀದ್ ಹಬ್ಬದ ವೇಳೆ ಆಡು ಮತ್ತು ಕುರಿಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಅವುಗಳ ಬೆಲೆಗಳು ಕೂಡ ಗಗನಕ್ಕೇರಿವೆ.
ಕಳೆದ ವರ್ಷ ಜನವರಿಯಲ್ಲಿ ಜಾರಿಗೆ ಬಂದ ಗೋ ಹತ್ಯೆ ನಿಷೇಧ ಕಾಯ್ದೆಯು ಎಲ್ಲಾ ವಯಸ್ಸಿನ ಹಸುಗಳು, ಕರುಗಳು, ಎತ್ತುಗಳು ಮತ್ತು ಮತ್ತು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಮ್ಮೆಗಳನ್ನು ವಧೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಕರ್ನಾಟಕ ಜಾನುವಾರು ವಧೆ ತಡೆ ಮತ್ತು ಸಂರಕ್ಷಣೆ ಕಾಯ್ದೆ, 2020 ರ ಅನುಸಾರ ಕರ್ನಾಟಕದಲ್ಲಿ ಜಾನುವಾರುಗಳ ಮಾರಾಟ, ಸಾಗಾಣಿಕೆ ಮತ್ತು ವಧೆಯನ್ನು ಅಧಿಕಾರಿಗಳು ಹತ್ತಿಕ್ಕುತ್ತಿರುವುದರಿಂದ, ಈ ವರ್ಷ ಜುಲೈ 10 ರಂದು ಬರುವ ಬಕ್ರಿದ್ ಹಬ್ಬಕ್ಕೆ ಮುಂಚಿತವಾಗಿ ಕುರಿ ಮತ್ತು ಮೇಕೆಗಳ ಬೆಲೆಗಳು ಗಗನಕ್ಕೇರಿವೆ.
ಇದರಿಂದಾಗಿ ಕುರಿಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಮೃದ್ಧ ರುಚಿ ಮತ್ತು ಕೊಬ್ಬಿನ ಅಂಶಕ್ಕೆ ಹೆಸರುವಾಸಿಯಾದ ಬನ್ನೂರು ತಳಿಯ ಕುರಿಗಳು ಒಂದು ಜೋಡಿಗೆ 75,000 ರೂ.ಗೆ ಮಾರಾಟವಾಗುತ್ತಿವೆ. ಕಳೆದ ವರ್ಷ ಈ ಬೆಲೆ 50,000 ರೂ.ಗಿಂತ ಹೆಚ್ಚಿರಲಿಲ್ಲ. ಅಮಿಂಗಡ ಮೇಕೆ 2021 ರಲ್ಲಿ 25,000 ರೂ.ಗಳಿಂದ 35,000 ರೂ.ಗಳವರೆಗೆ ಮಾರಾಟವಾಗುತ್ತಿದೆ. ಸಿಂಧ್ ನೌರ್ ಮತ್ತು ಜೈಪುರ ತಳಿಗಳ ಬೆಲೆ ತಲಾ 25,000 ರೂ.ಗಳಾಗಿದ್ದು, ಇದು ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ವ್ಯಾಪಾರಿಗಳ ಪ್ರಕಾರ, ಕಳೆದ ವರ್ಷ 8,000 ರೂ.ಗೆ ಮಾರಾಟವಾಗುತ್ತಿದ್ದ ಬನ್ನೂರು ಕುರಿ ಸುಮಾರು 12,000 ರೂ.ಗೆ ಮಾರಾಟವಾಗುತ್ತಿದೆ.
ಒಣ ಹಣ್ಣುಗಳು ಮತ್ತು ಜೋಳವನ್ನು ಮಾತ್ರ ತಿನ್ನುವ ಮತ್ತು ದಿನಕ್ಕೆ ಐದು ಲೀಟರ್ ಹಾಲು ಕುಡಿಯುವ ಒಂದು ನಿರ್ದಿಷ್ಟ ಅಮಿಂಗಡ್ ಮೇಕೆ, ಒಂದು ಜೋಡಿಗೆ 2.6 ಲಕ್ಷ ರೂ.ಗೆ ಮಾರಾಟವಾಗುತ್ತಿದೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಕುರಿಗಳು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವುದರಿಂದ ಜನರು ಅವುಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ ಎಂದು ರೈತರೊಬ್ಬರು ತಿಳಿಸಿದ್ದಾರೆ.